

ಇ.ಎಸ್.ಆರ್ ಪ್ರೆಸಿಡೆನ್ಸಿ ಶಾಲೆಯಲ್ಲಿ ಸಪ್ಟೆಂಬರ್ 20 ರಂದು ಈದ್ ಮಿಲಾದು ಹಬ್ಬವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರೂ ಅದ ಝಾಕಿರ್ ಹುಸೈನ್, ಗೌರವಾನ್ವಿತ ಅತಿಥಿಗಳಾದ, ಬಾಸಿತ್ ಹುದವಿ ಖತೀಬ್ ಕೂರ್ನಡ್ಕ, ಇರ್ಷಾದ್ ಫೈಝಿ ಖತೀಬ್ (ಮುಕ್ವೆ),,ಮುಕ್ವೆ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಶಿಬರ,
ಖ್ಯಾತ ಉದ್ಯಮಿಗಳಾದ ಯೂಸುಫ್ ಹಾಜಿ ಮೈಸೂರು, ಪಿ ಕೆ. ಜುಬೈರ್ ಮೈಸೂರು, ಉದ್ಯಮಿಯೂ, ಸಮಾಜ ಕಾರ್ಯಕರ್ತರೂ ಆದ ನಾಸಿರ್ ಕೋಲ್ಪೆ, ಬಿ. ಜಿ. ಕನ್ಸ್ಟ್ರಕ್ಷನ್ ಮಾಲೀಕರಾದ ಜುನೈದ್, ಮಂಗಳೂರಿನ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ರಫೀಕ್ ಮಾಸ್ಟರ್, ಉಸ್ತಾದ್ ರವರಾದ ಯೂಸುಫ್ ಶಾಹಿರ್ ಯಮಾನಿ, ಅಬ್ದುಲ್ ರಜಾಕ್,ಜಾಹಾರ್ ಅಲಿ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಸಿರಾಜ್ ಕೂರ್ನಡ್ಕ , ವಿದ್ಯಾ ಕೀರ್ತಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ವಿ . ಕೆ ಶರೀಫ್ ಬಪ್ಪಳಿಗೆ , ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತಂದರು.
ಬಂದಂತಹ ಅತಿಥಿಗಳು ಮಹಮ್ಮದ್ ಪೈಗಂಬರ್ರವರ ಆದರ್ಶಗಳನ್ನು ನೆನೆದು ಪ್ರಾರ್ಥನೆ ಸಲ್ಲಿಸಿದರು. ಹಾಗೂ ಶಾಲಾ ವಿದ್ಯಾರ್ಥಿಗಳು ಭಾಷಣ
ಭಾವಗೀತೆಮತ್ತು ಕಲೆಗಳ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು. ಎಲ್ಲರ ಉತ್ಸಾಹಪೂರ್ಣ ಭಾಗವಹಿಸುವಿಕೆ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.. ಶಾಲಾ ಶಿಕ್ಷಕರಾದ ಜಾಹಾರ್ ಅಲಿ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.