October 12, 2025
wmremove-transformed

ಕಾಸರಗೋಡು: ಶಾಲಾ ಆಟೋಟ ಸ್ಪರ್ಧೆಯ ನಡುವೆ ನಾಲ್ಕನೇ ತರಗತಿ ವಿದ್ಯಾರ್ಥಿ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮಂಗಲ್ಪಾಡಿ ಜಿ. ಬಿ ಎಲ್. ಪಿ ಶಾಲೆಯ ವಿದ್ಯಾರ್ಥಿ ಹಸನ್ ರಾಝಾ (10)ಮೃತಪಟ್ಟ ಬಾಲಕ. ಆಟೋಟ ಕ್ರೀಡಾ ಚಟುವಟಿಕೆ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.ಈತ ಉತ್ತರ ಪ್ರದೇಶದ ಮುರ್ಷಿದಾಬಾದ್ ನ ಇನ್ಸಾಫಾಲಿ ಎಂಬವರ ಪುತ್ರನಾಗಿದ್ದಾನೆ. ಉದ್ಯೋಗ ನಿಮಿತ್ತ ಆಗಮಿಸಿದ ವಲಸೆ ಕಾರ್ಮಿಕರ ಮಕ್ಕಳು ಕೇರಳದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. 

About The Author

Leave a Reply