November 8, 2025
WhatsApp Image 2025-09-25 at 9.12.29 AM

 ಐ ಲವ್ ಮೊಹಮ್ಮದ್ ಪ್ಲೆಕ್ಸ್ ವಿಚಾರವಾಗಿ 2 ಕೋಮಿನ ನಡುವೆ ಗಲಾಟೆಯಾಗಿದ್ದು, ಮನೆಗಳ ಮೇಲೆ ಕಲ್ಲು ತೋರಾಟ ನಡೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್ ನಲ್ಲಿ ಗಲಾಟೆಯಾಗಿದ್ದು, ನಾಲ್ವರಿಗೆ ಗಾಯಾಗಳಿವೆ ಎಂದು ಸ್ಥಳೀಯರು ಹೇಳಿದ್ದು, ಮನೆಯ ಮುಂದೆ ಪ್ಲೆಕ್ಸ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆಯಾಗಿದೆ. ಪ್ಲೆಕ್ಸ್ ಬ್ಲೇಡ್ ಹಾಕಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ್ದು, 500-600 ಜನ ಬಂದು ಗಲಾಟೆ ಮಾಡಿದ್ದಾರೆ. ಗಾಯಾಳುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಐ ಲವ್ ಮೊಹಮ್ಮದ್’ ಭಿತ್ತಿಪತ್ರ ವಿವಾದವು ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಬಳಿಕ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಬಿಗುವಿನ ಸ್ಥಿತಿ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬರೇಲಿಯಲ್ಲಿ ಉರುಸ್ ಯಾತ್ರೆ ವೇಳೆ ‘ಐ ಲವ್ ಮೊಹಮ್ಮದ್’ ಎಂಬ ಹಿಡಿದು ಮೆರವಣಿಗೆ ಸಾಗಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿ ಹಿಂದೂಗಳು ‘ಐ ಲವ್ ಮಹಾದೇವ್’ ಎಂಬ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಬಳಿಕ ಈ ವಿವಾದ ಹಲವು ರಾಜ್ಯಗಳಿಗೆ ಹಬ್ಬಿದೆ.

About The Author

Leave a Reply