October 13, 2025
WhatsApp Image 2025-09-26 at 12.37.07 PM

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು 2025-26 ನೇ ಸಾಲಿನ ಅಲ್ಪಸಂಖ್ಯಾತರ ಮುಸ್ಲಿಂ, ಜೈನ್, ಬೌದ್ದರು, ಸಿಖ್ ಹಾಗೂ ಪಾರ್ಸಿ ಸಮುದಾಯವರಿಗೆ ವಿವಿಧ ಯೋಜನೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಶ್ರಮಶಕ್ತಿ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ವಿದೇಶಿ ವ್ಯಾಸಂಗ ಸಾಲ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ, ಸಾಂತ್ವಾನ ಯೋಜನೆ ಹಾಗೂ ವ್ಯಾಪಾರ/ ಉದ್ಯಮಿಗಳಿಗೆ ನೇರಸಾಲ ಯೋಜನೆಯಡಿ www.kmdconline.karnataka.gov.in ಮೂಲಕ ಅ.16 ರೊಳಗಾಗಿ ಅರ್ಜಿ ಸಲ್ಲಿಸುವುದು.

ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬ ವಾರ್ಷಿಕ ಆದಾಯ ರೂ.6 ಲಕ್ಷದೊಳಗಿರಬೇಕು. ವೃತ್ತಿ ಪ್ರೋತ್ಸಾಹ ಯೋಜನೆಗೆ ನಗರ ಪ್ರದೇಶ ರೂ.1.30ಲಕ್ಷ ಹಾಗೂ ಗ್ರಾಮೀಣ ಪ್ರದೇಶ ರೂ.81000, ಸಾಂತ್ವಾನ ಯೋಜನೆಯಲ್ಲಿ ರೂ.8 ಲಕ್ಷದೊಳಗೆ ವಾರ್ಷಿಕ ಆದಾಯ ಇರಬೇಕು. ವಯಸ್ಸು ಕನಿಷ್ಠ 18 ರಿಂದ 55 ವರ್ಷದೊಳಗಿನವರಾಗಿರಬೇಕು. ಅರ್ಜಿದಾರರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಸದ ದೃಢೀಕರಣ ಪತ್ರ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಂಜಪ್ಪ ಆಸ್ಪತ್ರೆ ಮುಂಭಾಗದ ರಸ್ತೆ, ಅಚ್ಯುತರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ, ದೂ.ಸಂ :08182-228262 ನ್ನು ಸಂಪರ್ಕಿಸಬಹುದೆAದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply