October 12, 2025
WhatsApp Image 2025-08-30 at 9.39.36 AM

ಮಕ್ಕಳು ಏನೇ ತಪ್ಪು ಮಾಡಿದರು ಕೂಡ ತಂದೆ-ತಾಯಿ ಆದಂತವರು ಅವರಿಗೆ ಬೈದು, ತಿದ್ದಿ ಬುದ್ದಿ ಹೇಳಬೇಕು. ಅದನ್ನು ಬಿಟ್ಟು ತಮ್ಮ ಕೋಪವನ್ನು ಬುದ್ಧಿ ಕೈಯಲ್ಲಿ ಕೊಟ್ಟರೆ ಅನಾಹುತಗಳೇ ಹೆಚ್ಚು. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿ ಕೂಡ ಮನೆಯಲ್ಲಿ ಹಣ ಕದಿಯುತ್ತಿದ್ದಳು ಎನ್ನುವ ಒಂದೇ ಕಾರಣಕ್ಕೆ ಹೆತ್ತಮಗಳನ್ನೇ ರಾಕ್ಷಸ ತಂದೆ ಒಬ್ಬ ಕತ್ತು ಹುಸ್ಕಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಹೌದು ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು ಕಟುಕ ತಂದೆಯೊಬ್ಬ ತನ್ನ 13 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ 40 ವರ್ಷದ ಆರೋಪಿ ತಂದೆ ಅಜಯ್‌ ಶರ್ಮಾನನ್ನ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಸೋನಮ್ (13) ಮೃತಪಟ್ಟ ಮಗಳು ಎಂದು ತಿಳಿದುಬಂದಿದೆ.

ಮೃತ ಸೋಮನ್‌ ಗುರುವಾರ ಎಂದಿನಂತೆ ಶಾಲೆಗೆ ಹೋಗಿದ್ದಳು. ಪ್ರತಿದಿನ ಶಾಲೆ ಮುಗಿದ ಬಳಿಕ ಆಕೆಯ ನಾನೇ ಮನೆಗೆ ಕರೆದುಕೊಂಡು ಹೋಗ್ತಿದ್ದೆ. ಆದ್ರೆ ಗುರುವಾರ ಆಕೆಯನ್ನ ಮನೆಗೆ ಕರೆದೊಯ್ಯುವ ಬದಲು ತನ್ನ ಹೊಲಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲೇ ಮಗಳಿಗೆ ಸ್ಕಾಫ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದೇನೆ. ಬಳಿಕ ಶವವನ್ನ ಹತ್ತಿರದ ಕಾಲುವೆಗೆ ಎಸೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾನೆ.

ಶುಕ್ರವಾರ ಸಂಜೆ ಹೊತ್ತಿಗೆ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದ್ದಾಗಿ ಬುಲಂದ್‌ಶಹರ್ ಪೊಲೀಸರಿಗೆ ಮಾಹಿತಿ ಬಂದಿತು. ಅನುಪ್‌ಶಹರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಸೇತುವೆ ಕೆಳಗಿನ ಪೊದೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ತಂದೆಯೇ ಆರೋಪಿ ಅನ್ನೋದು ಗೊತ್ತಾಗಿದೆ. ಬಳಿಕ ವಿಚಾರಣೆ ವೇಳೆ ಆರೋಪಿ ಕೂಡ ತಪ್ಪೊಪ್ಪಿಕೊಂಡಿದ್ದಾನೆ.

About The Author

Leave a Reply