

ಯೂತ್ ಪೋರಂ, ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಯೂತ್ ಪಾರಂ ಸ್ಥಾಪಕ ಅಧ್ಯಕ್ಷರಾದ ಮೊಹಸೀರ್ ಅಹ್ಮದ್ ಸಾಮಾನಿಗೆ ಅವರ ನೇತೃತ್ವದಲ್ಲಿ ತೋಕ್ಕೊಟು ವಿನ ಹೊಟೇಲ್ Shri Rathnam ನ ಸಭಾಂಗಣದಲ್ಲಿ 28.09.2025 ರಂದು ಯಶಸ್ವಿಯಾಗಿ ನಡೆಯಿತು.
ಸಭೆಯ ಆರಂಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ನೌಷಾದ್ ಬಂಟ್ವಾಳ್ ಅವರು ಸಂಘಟನೆಯ ಕಾರ್ಯಪಟು ವರದಿಯನ್ನು ಮಂಡಿಸಿ, ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು
ಸ್ಥಾಪಕ ಅಧ್ಯಕ್ಷರಾದ *ಮೊಹಸೀರ್ ಅಹ್ಮದ್ ಸಾಮಾನಿಗೆ ಮತ್ತು ರಾಝೀಕ್ ಮಾತನಾಡಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಸಂಘಟನೆಯ ಸಾಧನೆಗಳನ್ನು ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂಘಟನೆಯು ಯಾವಾ ರೀತಿ ತೊಡಗಿಸಿಕೊಂಡಿದೆ ಎಂದು ಸವಿವರವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಹೊಸದಾಗಿ ಸೇರಿಕೊಂಡ ಸದಸ್ಯರ ಪರಿಚಯ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಏಕಮತದ ಅನುಮತಿಯೊಂದಿಗೆ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಸಂಘಟನಾ ಅಧ್ಯಕ್ಷರಾಗಿ ರಿಯಾಝ್ ಆರ್. ಕೆ. ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು ಕಾರ್ಯಕ್ರಮದ ಕೊನೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮುಂದಿನ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.






