October 13, 2025
WhatsApp Image 2025-09-29 at 10.42.43 AM

ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಾಕಷ್ಟು ಹಣ ಗಳಿಸಬಹುದು ಎಂಬ ಮೆಸೇಜ್​ಗಳು ನಿಮ್ಮ ಮೊಬೈಲ್​ಗೂ ಬಂದಿರಬಹುದು. ಸ್ಮಾರ್ಟ್​ ಫೋನ್ ಇದ್ದರೆ ಕೇವಲ ಕೆಲವು ವೆಬ್​ಸೈಟ್​ಗಳಿಗೆ ರಿವ್ಯೂ ಕೊಡುವ ಮೂಲಕ, ಕೆಲವು ಪೋಸ್ಟ್​ಗಳಿಗೆ ಲೈಕ್ ಕೊಡುವ ಮೂಲಕ ಸಾವಿರಾರು ರೂ. ದುಡಿಯಬಹುದು ಎಂದು ನಂಬಿಸುವವರಿದ್ದಾರೆ.

ಆದರೆ, ಅದನ್ನು ನಂಬಿ ಯಾಮಾರಿದ ಮಹಿಳೆಯೊಬ್ಬರು 2.5 ಲಕ್ಷ ಕಳೆದುಕೊಂದಿದ್ದಾರೆ.   ವರ್ಕ್ ಫ್ರಮ್ ಹೋಂ ಜಾಹೀರಾತು ನಂಬಿದ ಮಹಿಳೆಯೋರ್ವರು 2 ಲಕ್ಷ ರೂ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.   ಮಹಿಳೆಯೋರ್ವರಿಗೆ ಕಿಡಿಗೇಡಿ ವರ್ಕ್ ಫ್ರಮ್ ಹೋಂ ಜಾಹೀರಾತು ಲಿಂಕ್ ಕಳುಹಿಸಿದ್ದಾನೆ. ಕೆಲಸ ಮಾಡಲು ಇಷ್ಟವಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ಎಂದಿದ್ದಾನೆ.

ಇದನ್ನು ನಂಬಿದ ಮಹಿಳೆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ ದುಷ್ಕರ್ಮಿಗಳು ಹೇಳಿದಂತೆ ಮಾಡಿದ್ದಾರೆ. ಮೊದಲಿಗೆ 1300 ರೂ ಹಣ ನೀಡಿದ ವಂಚಕರು ಇಷ್ಟು ಹಣ ಹಾಕಿದ್ರೆ ದುಪ್ಪಟ್ಟು ಹಣ ನೀಡುತ್ತೇವೆ ಎಂದು ಒಟ್ಟು 2,57,600 ರೂ ಹಣ ಹಾಕಿಸಿಕೊಂಡಿದ್ದಾರೆ. ಹಣ ಬಂದ ನಂತರ ಸಂಪರ್ಕ ಕಳೆದುಕೊಂಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply