

ಬಂಟ್ವಾಳ ತಾಲೂಕಿನ ಅತೀದೊಡ್ಡ ಗ್ರಾಮ ಪಂಚಾಯತ್ ಗಳಲ್ಲೊಂದಾದ ಕೊಳ್ನಾಡು ಗ್ರಾಮ ಪಂಚಾಯತಿನಲ್ಲಿ ಪ್ರಮಾಣೀಕ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಇದೀಗ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡ ಲಾವಣ್ಯ ಪಿ.ಅವರಿಗೆ ಕೊಳ್ನಾಡು ಗ್ರಾ.ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ಬಿಳ್ಕೊಡುಗೆ ಸಮಾರಂಭ ಜರುಗಿತು.

ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿ ವಿಶ್ವಾಸ,ಹೊಂದಾಣಿಕೆಯೊಂದಿಗೆ ಉತ್ತಮ ಕಾರ್ಯನಿರ್ವಹಿಸಿ ಗ್ರಾಮದ ನಾಗರೀಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
.ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಶುಭಕೋರಿದರು.ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ, ಹಿರಿಯ ಸದಸ್ಯರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತಾಡಿ ಮಹಿಳಾ ಅಭಿವೃದ್ಧಿ ಅಧಿಕಾರಿಯಾದ ಲಾವಣ್ಯ.ಪಿ.ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಅವರ ಮುಂದಿನ ವೃತ್ತಿಪರ ಜೀವನವೂ ಯಶಸ್ವಿಯಾಗಲಿ ಎಂದು ಹಿತ ನುಡಿಗಳೊಂದಿಗೆ ಶುಭ ಹಾರೈಸಿದರು.ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಸೇರಿದಂತೆ ಇತರ ಸದಸ್ಯರು ಶುಭ ಹಾರೈಕೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು,ಲೆಕ್ಕ ಸಹಾಯಕ ದಿನೇಶ್,ಗ್ರಾಮ ವ್ಯಾಪ್ತಿಯ ಅಂಗವಾಡಿ ಮೇಲ್ವಿಚಾರಕಿ ರೇಣುಕಾ,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತರು,ಗುತ್ತಿಗೆದಾರರು,ಗ್ರಾ.ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತಿತರಿದ್ದರು.