

ವಿಟ್ಲ ಕನ್ಯಾನ ರಸ್ತೆಯು ತೀರ ಹದೆಗೆಟ್ಟು ಹೋಗಿದ್ದು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಆಕೃತಿ ರಚನೆ ಮಾಡಿ ರಸ್ತೆಯಲ್ಲಿ ಇತ್ತು ಆಕ್ರೋಶ ಹಾಕಿದ್ದಾರೆ.

ಮಂಜೇಶ್ವರ ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ಮತ್ತು ಪಾದಾಚಾರಗಳಿಗೆ ನಡೆದಾಡಲು ತೊಂದರೆ ಆಗುತ್ತಿತ್ತು. ವರ್ಷಗಳಿಂದ ಇಂಟರ್ಲಾಕ್ ಅಳವಡಿಸಿದ್ದು. ಅದೀಗ ಕಿತ್ತು ಹೋಗಿದೆ ಈ ರಸ್ತೆಯ ವಿಟ್ಲದಿಂದ ಕನ್ಯಾನ ಬಾಯಾರು ಉಪ್ಪಳ ಆನೆಕಲ್ಲು ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಪಿಸುತ್ತಿತ್ತು .ಪ್ರತಿದಿನ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು ರಸ್ತೆ ಹದೆಗೆಟ್ಟು ಪರಿಣಾಮ ವಾಹನ ಸಂಚಾರ ದುಸ್ತರವಾಗಿದೆ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಇಂಜಿನಿಯರ್ .ಗುತ್ತಿಗೆದಾರರು ಮಲಗಿರುತ್ತಾರೆ ಯಾರು ತೊಂದರೆ ಕೊಡಬಾರದು ಎಂದು ಬರೆಯಲಾಗಿದೆ.
