

ಮಂಗಳೂರು ಹೊರವಲಯದ ಕೊಣಾಜೆ ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ಎಂಬಲ್ಲಿ ಇಂದು (ಅ.14)ಮಧ್ಯಾಹ್ನ ಯುವಕನೊರ್ವನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನನ್ನು ಮುದುಂಗಾರುಕಟ್ಟೆಯ ಸಮೀಪದ ಪಾತೂರಿನ ಮುಹಮ್ಮದ್ ನಿಯಾಫ್ (28) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ವ್ಯಕ್ತಿಯೊಬ್ಬರು ದ್ವಿಚಕ್ರವಾಹನವನ್ನು ಬಸ್ ನಿಲ್ದಾಣದ ಬಳಿ ಇಡಲು ಹೋದಾಗ ಮೃತದೇಹ ಪತ್ತೆಯಾಗಿದೆ.
ನಿಯಾಫ್ ಬಾವಿಯ ರಿಂಗ್ ತಯಾರಿಕೆ ಹಾಗೂ ಇತರ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಹಲವು ತಿಂಗಳ ಹಿಂದೆ ಮುದುಂಗಾರುಕಟ್ಟೆಯ ಬಳಿ ಮಹಿಳೆಯರ ಸರವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ನಿಯಾಫ್ ವಿರುದ್ದ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.