October 21, 2025
mbb

ಇಬ್ಬರು ಅಪ್ರಾಪ್ತ ಕಾಲೇಜು ಬಾಲಕಿಯರನ್ನು  ಪುಸಲಾಯಿಸಿ ನಾಲ್ಕು ಮಂದಿ ಯುವಕರು ಮನೆಯೊಂದಕ್ಕೆ ಕರೆದುಕೊಂಡು ಬಂದು ಗ್ಯಾಂಗ್ ರೇಪ್ ಮಾಡಲು ಯತ್ನಿಸುತ್ತಿದ್ದ ವೇಳೆ ಮೂಡಬಿದಿರೆ ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ನಿದ್ದೋಡಿ ಗ್ರಾಮದ ಮಹೇಶ್ ಮನೆಯಲ್ಲಿ ಸೆ.13 ರಂದು ಸಂಜೆ 6 ಗಂಟೆಗೆ ಇಬ್ಬರು ಅಪ್ರಾಪ್ತ ಕಾಲೇಜ್ ಬಾಲಕಿಯನ್ನು ಸುಳ್ಳು ಹೇಳಿ ಕರೆದುಕೊಂಡು ಬಂದು ಗ್ಯಾಂಗ್ ರೇಪ್ ಮಾಡಲು ತಯಾರಿ ನಡೆಸುತ್ತುದ್ದಾಗ ಖಚಿತ ಮಾಹಿತಿ ಮೇರೆಗೆ ಮೂಡಬಿದಿರೆ ಪೊಲೀಸರು ದಾಳಿ ಮಾಡಿ ಇಬ್ಬರು ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಡಬಿದಿರೆಯ ನಿಡೋಡಿ ನಿವಾಸಿ ಆಟೋ ಚಾಲಕ ಮಹೇಶ್(30), ಕಟೀಲು ನಿವಾಸಿ ಕಿನ್ನಿಗೋಳಿಯಲ್ಲಿ ಹಾಲಿನ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀಕಾಂತ್(25),ಕಟೀಲು ನಿವಾಸಿ ಅಂಗಡಿ ಹೊಂದಿರುವ ಯಜೇಶ್ (25), ಕಟೀಲು ನಿವಾಸಿ ವೆಲ್ಡರ್ ಕೆಲಸ ದಿಲೀಪ್(25) ಬಂಧಿತ ಆರೋಪಿಗಳು. ಮನೆಯಲ್ಲಿ ಅತ್ಯಾಚಾರಕ್ಕೆ ಬಳಸಲು ತಂದಿದ್ದ ಮೆಡಿಕಲ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಅ.13 ರಂದು ರೇಪ್ & ಪೋಕ್ಸೋ ಪ್ರಕರಣ ದಾಖಲಾಗಿದೆ.

ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ನೇತೃತ್ವದಲ್ಲಿ ಸಿಬ್ಬಂದಿ ನಾಗರಾಜ್, ಅಖಿಲ್ ಅಹಮದ್, ಮಹಮ್ಮದ್ ಹುಸೇನ್, ಮಹಮ್ಮದ್ ಇಟ್ಬಾಲ್, ವೆಂಕಟೇಶ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

About The Author

Leave a Reply