

ಮಂಗಳೂರಿನ ಮೂಲದ ವೈದ್ಯೆ ಡಾ. ಅಫ್ರೀನ್ ಮುಬೀನ್ ಶೇಖ್ ಅವರಿಗೆ “ವರ್ಷದ ಆರೋಗ್ಯ ರಕ್ಷಣಾ ಉದ್ಯಮಿ – ಆರೋಗ್ಯ ಮತ್ತು ಸ್ವಾಸ್ಥ್ಯ, ಯುಎಇ” ವಿಭಾಗದಲ್ಲಿ ಕತಾರ್‌ನಲ್ಲಿ ‘ಫ್ಲಕ್ಸ್ ಪ್ರಶಸ್ತಿ 2025′ ನೀಡಿ ಗೌರವಿಸಲಾಗಿದೆ.
ಡಾ. ಅಫ್ರೀನ್ ಗೆ
ಯುಎಇ ನಲ್ಲಿ ಹಿಂದೆ ಎರಡು ಪ್ರಶಸ್ತಿಗಳು ಬಂದಿದ್ದವು. ಫ್ಲಕ್ಸ್ ಪ್ರಶಸ್ತಿ 2025’ ಮಧ್ಯಪ್ರಾಚ್ಯದಲ್ಲಿ ಪಡೆದ ಮೂರನೇ ಪ್ರಮುಖ ಮನ್ನಣೆಯಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ವೃತ್ತಿಯಲ್ಲಿರುವವರಿಗೆ ನೀಡುವ ಪ್ರಶಸ್ತಿ ಯಾಗಿದೆ.
ಟಿ.ಎಸ್. ಶರ್ಫುಲ್ಲಾ ಶೇಖ್ ಮತ್ತು ಶ್ರೀಮತಿ ಮೆಹ್ತಾಬ್ ಶೇಖ್ ಅವರ ಪುತ್ರಿ, ಡಾ. ಅಫ್ರೀನ್ ಅವರು ಗಲ್ಫ್ ಪರವಾನಗಿ ಮತ್ತು ರೆಸಿಡೆನ್ಸಿ ಪರೀಕ್ಷೆಗಳಿಗೆ ವಿಶ್ವಾದ್ಯಂತ ವೈದ್ಯರು ಮತ್ತು ವೈದ್ಯಕೀಯ ಪದವೀಧರರಿಗೆ ತರಬೇತಿ ನೀಡುವ “ಡಾ. ಅಫ್ರೀನ್ಸ್ ಅಕಾಡೆಮಿ” ಮತ್ತು “ಎಮ್ರೀ ಪ್ರೆಪ್” ಸಂಸ್ಥೆಗಳ ಸ್ಥಾಪಕಿಯಾಗಿದ್ದಾರೆ.
ಅವರು ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಪೂರೈಕೆದಾರರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.
ಆಫ್ರೀನ್ ಅವರ ಪತಿ ಡಾ. ಮೊಹಮ್ಮದ್ ಮುಬೀನ್
ದುಬೈನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಆಗಿದ್ದಾರೆ.
ಡಾ. ಅಫ್ರೀನ್ ಅವರ ಸಾಧನೆಯು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ನಾಯಕತ್ವಕ್ಕೆ ಹೆಸರಾಗಿದೆ. ಹೊಸ ಪೀಳಿಗೆಯ ವೈದ್ಯಕೀಯ ವೃತ್ತಿಪರರಿಗೆ ಸ್ಫೂರ್ತಿ ನೀಡುತ್ತದೆ.