October 20, 2025
WhatsApp Image 2025-10-20 at 10.48.43 AM

ಇಂದು ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಪಟಾಕಿ ಸಿಡಿಸುವ ವೇಳೆ ಮಕ್ಕಳ ಜೊತೆಗೆ ಪೋಷಕರು ಇರಲೇಬೇಕು. ಏಕೆಂದರೆ ಪಟಾಕಿ ಸಿಡಿಸುವಾಗ ಮಕ್ಕಳಿಗೆ ಯಾವುದೇ ಅನಾಹುತ ಆಗದಂತೆ ಎಚ್ಚರದಿಂದ ಇರಬೇಕಾದದ್ದು ಪೋಷಕರ ಕರ್ತವ್ಯ. ಇದೀಗ ಪಟಾಕಿ ಸಿಡಿದ ಪರಿಣಾಮ ಬೆಂಗಳೂರಲ್ಲಿ ಐವರು ಬಾಲಕರ ಕಣ್ಣಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ವರದಿಯಾಗಿದೆ.

ಹೌದು ಬೆಂಗಳೂರಲ್ಲಿ ಪಟಾಕಿ ಅವಘಡದಿಂದ ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಪಟಾಕಿ ಸಿಡಿಸಲು ಹೋಗಿ ಇಬ್ಬರು ಬಾಲಕರ ಕಣ್ಣಿಗೆ ಗಾಯವಾಗಿದೆ. 12 ಹಾಗೂ 14 ವರ್ಷದ ಬಾಲಕರ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಳು ಬಾಲಕರಿಗೆ ಸದ್ಯ ಮಿಂಟೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಸಂಜೆ ರಾಕೆಟ್ ಪಟಾಕಿ ಸಿಡಿದು ಬಾಲಕರ ಕಣ್ಣಿಗೆ ಗಾಯವಾಗಿದೆ.

ಇನ್ನು ನಾರಾಯಣ ನೇತ್ರಾಲಯದಲ್ಲಿ ಮೂರು ಪಟಾಕಿ ಸಿಡಿತದಿಂದ ಮೂವರು ಬಾಲಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. 15 ವರ್ಷದ ಮಕ್ಕಳಿಗೆ ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವ ನೋಡುತ್ತಿದ್ದ ವೇಳೆ ಈ ಒಂದು ಘಟನೆ ನಡೆದಿದೆ. ಪಟಾಕಿ ಸಿಡಿಸುವವರಿಗಿಂತ ನೋಡುವವರಿಗೆ ಗಾಯಗಳಾಗುತ್ತಿವೆ. ಹಾಗಾಗಿ ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಅಲ್ಲಿಯೇ ಇದ್ದು ಎಚ್ಚರದಿಂದ ಯಾವುದೆ ಅನಾಹುತಗಳು ಆಗದಂತೆ ನೋಡಿಕೊಳ್ಳಬೇಕು.

About The Author

Leave a Reply