October 23, 2025
WhatsApp Image 2025-10-23 at 2.31.05 PM

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ವಿಟ್ಲ ಪಡ್ನೂರು ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳನ್ನು ಸೇರಿಸಿಕೊಂಡು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ ಸಂದೇಶ್ ಶೆಟ್ಟಿಯವರ ಸಂಯೋಜಕತ್ವದಲ್ಲಿ ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ ಮಹಿಳಾ ಭಾವೈಕ್ಯತಾ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317d ಜಿಲ್ಲಾ ರಾಜ್ಯಪಾಲರಾದ ಅರವಿಂದ್ ಶೆಣೈ ಕುಡ್ಪಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ನುಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ರವಿಕುಮಾರ್ ಅವರ ವಹಿಸಿದ್ದರು. ಮಾಜಿ ಸಚಿವ ಬಿ ರಮಾನಾಥ ರೈ ಅವರು ಆಗಮಿಸಿ ಶುಭ ಹಾರೈಸಿದರು.

ಲಯನ್ಸ್ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ ಪಡಿಯಾರ್ , ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಂತ್ ಪಿ, ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕೊಡಂಗಾಯಿ ಇದರ ಉಪಾಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಎಸ್ ಡಿ ಎಂ ಸಿ ಅಧ್ಯಕ್ಷ ಹಸೈನಾರ್ ಬಿ.ಎಂ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಶ್ರೀ ಬಿ. ಸಂದೇಶ್ ಶೆಟ್ಟಿಯವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ, ಪ್ರಾಸ್ತವಿಕ ಮಾತಿನೊಂದಿಗೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ನಾಯ್ಕ, ನಿವೃತ್ತ ಮುಖ್ಯ ಶಿಕ್ಷಕಿಯಾದ ಮೋಹಿನಿ, ನಿವೃತ್ತ ಶಿಕ್ಷಕ ರಾಮಣ್ಣಗೌಡ ಗಡದ ಕೋಡಿ, ಪೂರ್ಲಪ್ಪಾಡಿ ಅಂಗನ ವಾಡಿಯ ನಿವೃತ್ತ ಕಾರ್ಯಕರ್ತೆ ಕಮಲ.ಡಿ, ಮೆಸ್ಕಾಂ ನಿವೃತ್ತ ಉದ್ಯೋಗಿ ನಾಗರಾಜ್, ನಿವೃತ್ತ ಎಎಸ್ಐ ಪೊಲೀಸ್ ಅಧಿಕಾರಿ ಕುಕ್ಕಿಲ ಮೋನಪ್ಪ ಗೌಡ, ನಿವೃತ್ತ ಸೈನಿಕರು ನಾಗರಾಜ್ ಕೆ ಕುಕ್ಕಿಲ ಇವರಿಗೆ ಸನ್ಮಾನ ಹಾಗೂ ಗೌರವಾರ್ಪಣೆ ಮಾಡಲಾಯಿತು.

ಹಿರಿಯ ಕೃಷಿಕರಾದ ಲಕ್ಷ್ಮಣ ಸಪಲ್ಯ ಕುಕ್ಕಿಲ, ಕ್ರೀಡಾ ಕ್ಷೇತ್ರದಲ್ಲಿ ಕುಮಾರಿ ಕೀರ್ತಿ ಲಕ್ಷ್ಮಣಗೌಡ ಕುಕ್ಕಿಲ, ಸಾಹಿಲ್ ಕೊಡಂಗೆ, ಆಯುಷಿ ಆದಿತ್ ಶೆಟ್ಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕುಮಾರಿ ಸುಚಿತಾ ಕಾಪುಮಜಲು,
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ, ಹಾಗೂ ಆಶಾ ಕಾರ್ಯಕರ್ತೆಯರ ಮಕ್ಕಳಿಗೆ ಪ್ರೋತ್ಸಾಹಕ ಧನ ಸಹಾಯ ದೊಂದಿಗೆ ಗೌರವರ್ಪಣೆ ಮಾಡಲಾಯಿತು.

ವಿಟ್ಲ ಪಡ್ನೂರು ಗ್ರಾಮದ ಎಸ್ ಎಲ್ ಸಿ ಯಲ್ಲಿ 600 ಕ್ಕಿಂತ ಅಧಿಕ ಅಂಕ ಹಾಗೂ ಪಿಯುಸಿಯಲ್ಲಿ 575ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಕ ಧನ ಸಹಾಯದೊಂದಿಗೆ ಗೌರವಾರ್ಪಣೆ ಮಾಡಲಾಯಿತು.

ವಿಟ್ಲ ಪಡ್ನೂರು ಗ್ರಾಮದ ಎಲ್ಲಾ ಹನ್ನೊಂದು ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಅವರ ಬೇಡಿಕೆಗಳಿಂದ ಮೂಲವಾಗಿ ನಾಮಪಲಕ, ಮಕ್ಕಳ ಕುರ್ಚಿ, ಟೇಬಲ್ ಇತ್ಯಾದಿಗಳನ್ನು ದಾನಿಗಳ ಸಹಕಾರದಿಂದ ವಿತರಣೆ ಮಾಡಲಾಯಿತು.

ಅವಘಡದಲ್ಲಿ ಬಲ ಕೈಯನ್ನು ಕಳೆದುಕೊಂಡ ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಹರ್ಷಿತ್ ಮೂರ್ಜೆ ಬೆಟ್ಟು, ಅವರನ್ನು ಕ್ಲಬ್ ವತಿಯಿಂದ ಗುರುತಿಸಿ ಗೌರವಿಸಲಾಯಿತು.

ವಿಟ್ಲ ಪಡ್ನೂರು ಗ್ರಾಮ ಆಡಳಿತ ಅಧಿಕಾರಿ ವೈಶಾಲಿ, ವಿಟ್ಲ ಪಡ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಡೋಣುರ , ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇದರ ನಿವೃತ್ತ ಮುಖ್ಯ ಶಿಕ್ಷಕರು ಶ್ರೀರಾಮಚಂದ್ರ ನಾಯ್ಕ, ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಯಂ.ವಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕೊಡಂಗಾಯಿ ಇದರ ಉಪಾಧ್ಯಕ್ಷ ಹೇಮಾನಂದ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಕಾರ್ಯದರ್ಶಿಯರಾದ ದಿನಕರ್ ಆಳ್ವ , ಡಿಜಿ ಕೊ- ಆಡಿನೇಟರ್ ಸುನಿಲ್ ಹೆಗಡೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ, ರಾಘವ ಗೌಡನ, ಮೋಹನ್ ಕಟ್ಟೆ, ರವಿಕುಮಾರ್ ಆರ್. ಎಸ್, ಕೃಷ್ಣಪ್ಪ ಮೂಲ್ಯ, ಮಾಜಿ ಅಧ್ಯಕ್ಷರಾದ ಜಯರಾಮ್ ಬಳ್ಳಾಲ್ , ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ರೇಣುಕಾ ಕೋಡಪದವು, ನಿರೂಪಿಸಿದರು.

About The Author

Leave a Reply