

ಮಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶವನ್ನು ಹಂಚಿದ ಆರೋಪದ ಮೇರೆಗೆ ಕಂಕನಾಡಿ ನಗರ ಠಾಣೆಯಲ್ಲಿ ನಝೀರ್ ಮಂಗಳೂರು ಮತ್ತು Gandhian Nehruvian Magar ಎಂಬ ಎರಡು ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅ.21ರಂದು ಅಪರಾಹ್ನ 3 ಗಂಟೆಗೆ ತಾನು ಸಾಮಾಜಿಕ ಜಾಲತಾಣಾ ಮಾನಿಟರಿಂಗ್ ನಿಗಾವಣೆ ಕರ್ತವ್ಯದ ಮೇರೆಗೆ ಫೇಸ್‌ಬುಕ್ ವೀಕ್ಷಿಸುತ್ತಿರುವಾಗ ನಝೀರ್ ಮಂಗಳೂರ್ ಎಂಬ ಫೇಸ್‌ಬುಕ್ ಖಾತೆಯಿಂದ Mumthas Abdul Nelyadka ಮತ್ತು Mahesh Vikram Hegde ಎಂಬ ಫೇಸ್‌ಬುಕ್ ಖಾತೆಗಳಿಗೆ ಟ್ಯಾಗ್ ಮಾಡಿರುವ Gandhian Nehruvian Magar ಎಂಬ ಫೇಸ್‌ಬುಕ್ ಖಾತೆಯ ಮೂಲಕ Ai video but funny ಎಂಬ ಶೀರ್ಷೀಕೆ ಇರುವ 10 ಸೆಕೆಂಡ್‌ಗಳ ವಿಡಿಯೋ ತುಣುಕನ್ನು ಶೇರ್ ಮಾಡಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯ ಎಸಗುವಂತೆ ಮಾಡಲಾಗಿದೆ.
ಹಾಗಾಗಿ ನಝೀರ್ ಮಂಗಳೂರ್ ಮತ್ತು Gandhian Nehruvian Magar ಎಂಬ ಫೇಸ್‌ಬುಕ್ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಸೈ ಶಿವಕುಮಾರ್ ದೂರು ನೀಡಿದ್ದಾರೆ.