

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ – ಕನ್ನಡಿಗ – ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡಲು ಕಳೆದ 25 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಸಂಘಟನಾತ್ಮಕವಾಗಿ ದುಡಿಯುತ್ತಿರುವುದನ್ನು ಗೌರವಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನವರಾದ ಎಲ್ಲಾ ಜಾತಿ ಧರ್ಮಗವರ ಪ್ರೀತಿಗೆ ಪಾತ್ರರಾದ ,ಜನಪರ ಮತ್ತು ಕನ್ನಡ ಪರ ಹಾಗೂ ಸಮಾಜಮುಖಿ ಚಿಂತನೆಯುಳ್ಳ ಜಾತ್ಯಾತೀತ ಗುಣವಿರುವ ಯುವ ನಾಯಕರಾದ ಮೌಶಿರ್ ಅಹಮದ್ ಯಸ್ .ಎ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರು ಆದೇಶ ನೀಡಿದ್ದಾರೆ. ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ನೀಡಿರುವ ಕುವೆಂಪು ರವರ ಆಶಯಗಳನ್ನು ಈಡೇರಿಸಿ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿಯಲಿದ್ದಾರೆ ಎಂದು ಆಶಿಸುತ್ತೇವೆ.






