October 25, 2025
WhatsApp Image 2025-10-25 at 10.39.46 AM

ಮಂಗಳೂರು: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಅಕ್ಷರ ನಗರ ಮಲಾರ್ ನಿವಾಸಿ ಅಮೀರ್ ಮಲಾರ್ (46) ನಾಲ್ಕು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿ ಕಾಣೆಯಾಗಿದ್ದಾರೆ.

2022ರ ಜೂನ್ 11ರಂದು ಅವರು ಕೊನೆಯ ಬಾರಿ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿ “ಬೆಂಗಳೂರು ತಲುಪಿದ್ದೇನೆ” ಎಂದು ತಿಳಿಸಿದ್ದರು. ಅದರ ನಂತರದಿಂದ ಇಂದಿನವರೆಗೆ ಕುಟುಂಬದವರೊಂದಿಗೆ ಯಾವುದೇ ಸಂಪರ್ಕ ಸಾಧಿಸದಿರುವುದರಿಂದ, ಅವರ ಕಾಣೆಯಾದ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಅಮೀರ್ ಮಲಾರ್ ಅವರ ಎತ್ತರ 5.9 ಅಡಿ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ, ಕಪ್ಪು–ಬಿಳಿ ಮಿಶ್ರಿತ ಗಡ್ಡ ಹೊಂದಿದ್ದಾರೆ. ತಲೆಯ ಮುಂಭಾಗದಲ್ಲಿ ಕೂದಲು ಇಲ್ಲ. ಕಾಣೆಯಾದ ದಿನ ಅವರು ನೀಲಿ ಬಣ್ಣದ ಚೌಕಳಿ ಶರ್ಟ್ ಧರಿಸಿದ್ದರು. ಅವರು ತುಳು, ಕನ್ನಡ ಮತ್ತು ಬ್ಯಾರಿ ಭಾಷೆ ಮಾತನಾಡುತ್ತಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಅಮೀರ್ ಮಲಾರ್ ಅವರ ಸುಳಿವು ಅಥವಾ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ತಕ್ಷಣ ಕೊಣಾಜೆ ಪೊಲೀಸ್ ಠಾಣೆ ಅಥವಾ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

About The Author

Leave a Reply