

ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಗೋ ಸಾಗಾಟಗಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಈ ಬಗ್ಗೆ ಗುಂಡೇಟು ಹಾಕುವಂತಹ ದೊಡ್ಡ ಪ್ರಕರಣ ಹೌದಾ ಎಂದು ಎಸ್‌ಡಿಪಿಐ ಅಭ್ಯರ್ಥಿಅನ್ವರ್ ಸಾದತ್ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅ.22ರಂದು ಈಶ್ವರ ಮಂಗಳದ ಬೆಳ್ಳಿಚಡವು ಎಂಬ ಸ್ಥಳದಲ್ಲಿ ಮುಂಜಾನೆ 6 ಗಂಟೆ ಸಮಯದಲ್ಲಿ ಹಾಸನದ ಜಾನುವಾರು ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳಕ್ಕೆ ಇಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಸಂಪ್ಯ ಪೊಲೀಸರು ವಾಹನಕ್ಕೆ ಕೈ ತೋರಿಸುತ್ತಾರೆ. ಆದರೆ ವಾಹನ ನಿಲ್ಲಿಸದೆ ಹೋಗಿದ್ದಾರೆ. ಈ ವೇಳೆ ಈಶ್ವರ ಮಂಗಳದ ಬೆಳ್ಳಿಚಡವು ಬಳಿ ವಾಹನ ಸ್ಟಾಟ್ ಬಂದ್ ಆದ ವೇಳೆ ಪೊಲೀಸರು ಚೇಸ್ ಮಾಡಿ ಹೀಡಿತ್ತಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಇಬ್ಬರು ಇದ್ದು, ಓರ್ವ ಓಡಿಹೋಗಿದ್ದು, ಮತ್ತೋರ್ವನ ಕಾಲಿಗೆ ಗುಂಡೇಟು ಬಿದ್ದಿದೆ. ಪೊಲೀಸರು ಹೇಳುವ ಪ್ರಕಾರ ಅವರು ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ಗುಂಡು ಹಾರಿಸಲಾಗಿದೆ. ಈ ಬಗ್ಗೆ ನಮಗೆ ಬಹಳ ಸಂಶಯ ಇದೆ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಾರೀ ಚರ್ಚೆಯಾಗುತ್ತಿದೆ. ಒಂದು ಗುಂಡೇಟು ಹಾಕುವಂತಹ ದೊಡ್ಡ ಪ್ರಕರಣ ಹೌದಾ ಎಂದು ಅನ್ವರ್ ಸಾದತ್ ಪ್ರಶ್ನಿಸಿದ್ದಾರೆ.
ಆತ ಜಾನುವಾರುಗಳನ್ನು ತಂದಿದ್ದಾರೆ. ತರುವಾಗ ಅದನ್ನು ಸಾಗಾಟ ಮಾಡುವಂತಹ ಅನುಮತಿ ಇಲ್ಲದಿದ್ದರೆ ಅಥವಾ ಅದು ಕಾನೂನು ಪ್ರಕಾರ ಸಾಗಾಟ ಮಾಡುವುದು ಅಲ್ಲ ಎಂದಾದರೆ ಪೊಲೀಸರಿಗೆ ಅದನ್ನು ವಶಪಡಿಸಿಕೊಂಡು ಜಪ್ತಿ ಮಾಡಿ ಆತನ ಮೇಲೆ ಪ್ರಕರಣ ದಾಖಲಿಸಲು ಬೇಕಾದಷ್ಟು ಅವಕಾಶಗಳಿವೆ. ಇದೆಲ್ಲದನ್ನು ಬಿಟ್ಟು ಅವರ ಕಾಲಿಗೆ ಶೂಟ್ ಮಾಡಿ ಅವರನ್ನು ಬಂಧಿಸಬೇಕಾದಂತಹ ಅಷ್ಟು ದೊಡ್ಡ ಅಪರಾಧ ಆ ವ್ಯಕ್ತಿ ಮಾಡಿದ್ದಾನಾ? ಇದು ಮಾನವ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.






