

ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಕಾರಿನ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಸವಾರರರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಕಾರಿನಿಂದ ಬೈಕಿಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯ ಶ್ರೀರಾಮ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಅಕ್ಟೋಬರ್ 25ರಂದು ದಂಪತಿಯಿಂದ ಬೈಕ್ ಸವಾರನ ಕೊಲೆಯಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಪುಟ್ಟಿನಹಳ್ಳಿಯ ಮನೋಜ್ ಮತ್ತು ಆತನ ಪತ್ನಿ ಆರತಿ ಶರ್ಮಾಳನ್ನು ಪೊಲೀಸರಿಗೆ ಅರೆಸ್ಟ್ ಮಾಡಿದ್ದಾರೆ. ಅಕ್ಟೋಬರ್ 21 ರಾತ್ರಿ 11:30ಕ್ಕೆ ದರ್ಶನ ಮತ್ತು ವರುಣ್ ಹೊರಗಡೆ ಬಂದಿದ್ದರು. ಇದೇ ವೇಳೆ ಕಾರಿನಲ್ಲಿ ಮನೋಜ್ ಮತ್ತು ಆರದಿ ಬರುತ್ತಿದ್ದರು. ಶ್ರೀರಾಮ ಲೇಔಟ್ ಬಳಿ ಕಾರಿನ ಮೇರರಿಗೆ ಬೈಕ್ ಟಚ್ ಆಗಿದೆ. ಬೈಕ್ ಸವಾರರು ದಂಪತಿ ಮನೋಜ್ ಮತ್ತು ಆರತಿಯಿಂದ ಪಾರಾಗಿದ್ದಾರೆ.
ಮತ್ತೆ ಮನೋಜ್ ಯುಟರ್ನ್ ತೆಗೆದುಕೊಂಡು ಹೋಗಿ ದಂಪತಿಗಳು ಬೈಕ್ ಪತ್ತೆ ಹಚ್ಚಿದ್ದಾರೆ. ಈ ವೇಳೆ ಹಿಂದಿನಿಂದ ಬೈಕ್ ಗೆ ಕಾರಿನಿಂದ ಡಿಕ್ಕಿ ಹೊಡೆದ ಮನೋಜ್, ಬೈಕ್ ಸವಾರರು ಹಾರಿ ಬಿದ್ದಿದ್ದಾರೆ. ದರ್ಶನ್ ಮತ್ತು ಇಬ್ಬರಿಗೂ ಗಂಭೀರವಾದ ಗಾಯಗಳಾಗಿವೆ ಬೈಕ್ ಡಿಕ್ಕಿ ಹೊಡೆದು ದಂಪತಿಗಳು ಎಸ್ಕೇಪ್ ಆಗಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರು ಸ್ಥಳಕ್ಕೆ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರಿನ ಪಾರ್ಟ್ಸ್ ಗಳನ್ನು ದಂಪತಿಗಳು ತೆಗೆದುಕೊಂಡು ಮತ್ತೆ ಪರಾರಿಯಾಗಿದ್ದಾರೆ.






