

ಬಂಟ್ವಾಳ: ಪವಿತ್ರ ಮೆಕ್ಕಾ ಉಮ್ರಾ ಯಾತ್ರೆಗೆ ತೆರಳಿದ್ದ ಬಂಟ್ವಾಳದ ಮಂಚಿಯ ವ್ಯಕ್ತಿಯೊಬ್ಬರು ಮೆಕ್ಕಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಅ. 29ರ ಬುಧವಾರ ನಡೆದಿದೆ.
ಮಂಚಿ ಕುಕ್ಕಾಜೆ ಸೂತ್ರಬೈಲ್ ನಿವಾಸಿ ಯೂಸುಫ್ (62) ಮೃತಪಟ್ಟವರು.
ಅವರು ಕಳೆದ ಕೆಲ ದಿನಗಳ ಹಿಂದೆ ತಂಡವಾಗಿ ಪತ್ನಿಯ ಜತೆಗೆ ಉಮ್ರಾ ಯಾತ್ರೆಗೆ ತೆರಳಿದ್ದರು. ಇಂದು ಮೆಕ್ಕಾದಲ್ಲಿ ಅವರ ಧಪನ ಕಾರ್ಯ ನಡೆಯಲಿದೆ ಎಂದು ಕುಟುಂಬ ವರ್ಗ ಮಾಹಿತಿ ನೀಡಿದೆ.






