November 8, 2025
WhatsApp Image 2025-10-31 at 6.36.55 PM

ಉಪ್ಪಿನಂಗಡಿ ಪರಿಸರದ ಸಮಾಜಮುಖಿ ಯುವಕರ ತಂಡವಾದ ಉಬಾರ್ ಡೋನರ್ಸ್ ಇದರ ಹಲವು ವರ್ಷಗಳ ಸಾಮಾಜಿಕ ಕಾರ್ಯ ನಿರ್ವಹಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

ಕಳೆದ ಹಲವಾರು ವರ್ಷಗಳಿಂದ ಯಾವುದೇ ಧರ್ಮ,ಜಾತಿ ನೋಡದೆ ಬಡಜನರ ಸೇವೆಗೈಯುತ್ತಾ ಬಂದಿರುವ ಉಬಾರ್ ಡೋನರ್ಸ್ ತಂಡ, ಹಲವು ಬಡನಿರ್ಗತಿಕರ ಪಾಲಿನ ಆಶಾಕಿರಣವಾಗಿದೆ. ಸನ್ಮಾನ್ಯ ಶಬೀರ್ ಕೆಂಪಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಾಮಾಜಿಕ ಕಳಕಳಿಯುಳ್ಳ ಯುವಕರ ತಂಡವು ಯಾವುದೇ ಸಂದರ್ಭದಲ್ಲೂ ಯಾವುದೇ ಸಹಾಯಕ್ಕೂ ಅಂಜದೆ ಸನ್ನದ್ದರಾಗಿರುವ ತಂಡವಾಗಿದೆ. ಇದೀಗ ಜಿಲ್ಲಾಪ್ರಶಸ್ತಿಗೆ ಆಯ್ಕೆಗೊಂಡಿರುವ ಉಬಾರ್ ಸ್ಪೋರ್ಟಿಂಗ್ ಕ್ಲಬ್/ಉಬಾರ್ ಡೋನರ್ಸ್ ಇದರ ಆಧಾರಸ್ತಂಭಗಳಾಗಿರುವ ಸದಸ್ಯರಿಗೂ ಆನಿವಾಸಿ ಸದಸ್ಯರಿಗೂ ಈ ಪ್ರಶಸ್ತಿ ಮುಂದೆ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಿಲಿ.

About The Author

Leave a Reply