

ಬಂಟ್ವಾಳ: ಕೇರಳ ಗಡಿಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ತಾನು ಪ್ರತಿನಿಧಿಸುವ ಅಸ್ಸ್-ಸದಕ ಟ್ರಸ್ಟ್ ಮೂಲಕ ಕೊಳವೆಬಾವಿ,ಸರಕಾರಿ ಶಾಲೆಗಳ ಉಳಿವಿಗಾಗಿ ಮೂಲಭೂತ ಸೌಕರ್ಯ, ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಶೌಚಾಲಯ, ಧನ ಸಹಾಯ, ವೈದ್ಯಕೀಯ ನೆರವು,ಬಡ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಇನ್ನಿತರ ಸೇವೆ (ಜೀವ ಕಾರುಣ್ಯ ಸೇವೆ)ಒದಗಿಸಿ ಜಾತಿ-ಧರ್ಮ ಭೇದವಿಲ್ಲದೇ ನಾಗರಿಕರ ಕಷ್ಟಗಳಿಗೆ ಸ್ಪಂದಿಸುತ್ತಾ ನಿರಂತರ ಸಮಾಜಸೇವೆ ಮಾಡಿದ ಹಸೈನಾರ್ ತಾಳಿತ್ತನೂಜಿಯವರಿಗೆ 2025 ನೇ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.






