

ಉಪ್ಪಿನಂಗಡಿ ಪರಿಸರದ ಹೆಮ್ಮೆಯಾಗಿರುವ ಉಬಾರ್ ಸ್ಪೋರ್ಟಿಂಗ್ ಕ್ಲಬ್ / ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಸಂತೋಷ ಮತ್ತು ಅಭಿಮಾನದ ಸಂಗತಿ.
ಕೋವಿಡ್ ಸಮಯದಿಂದಲೂ ನಿರಂತರವಾಗಿ ಮಾಡುತ್ತಿರುವ ಸೇವಾ ಕಾರ್ಯಗಳು ನಿಜಕ್ಕೂ ಪ್ರಶಂಸನೀಯ. ಈ ಸಂಸ್ಥೆಯ ಹಿಂದಿನ ಶಕ್ತಿಯಾಗಿರುವ ಶಬೀರ್ ಕೆಂಪಿಯವರ ನೇತೃತ್ವ ಮಾದರಿಯಾಗಿದೆ.
ಇಂತಹ ಮಹತ್ವದ ಕಾರ್ಯ ಸೇವೆಯನ್ನು ಮುಂದುವರಿಸಲು ಸರ್ವಶಕ್ತನಾದ ಅಲ್ಲಾಹನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಇದಕ್ಕಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕಿನ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಮುಸ್ತಫ ಲತೀಫಿ
ಅಧ್ಯಕ್ಷರು,
ಎಸ್ ಡಿ ಪಿ ಐ. ಉಪ್ಪಿನಂಗಡಿ ಬ್ಲಾಕ್.






