

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಯೂತ್ ಪೋರಂ ಇದರ ಜಂಟಿ ಆಶ್ರಯದಲ್ಲಿ ಇವತ್ತು ಸಮ್ಮರ್ ಸ್ಯಾಂಡ್ ರೆಸಾರ್ಟ್ ಹತ್ತಿರದ ಅಭಯ ಗಾರ್ಡನ್ ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಸಮಾರಂಭವು ಅತ್ಯಂತ ಭವ್ಯ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಯೂತ್ ಫೋರಂನ ಸ್ಥಾಪಕ ಅಧ್ಯಕ್ಷರಾದ ಮೌಸೀರ್ ಅಹ್ಮದ್ ಸಾಮಾನಿಗೆಯವರು ವಹಿಸಿದರು.
ಮುಖ್ಯ ಅತಿಥಿಯಾಗಿ ಸಾಹಿತಿ ಹಾಗೂ ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್. ನಾಯಕ್, ಸಭೆಯನ್ನುದ್ದಶಿಸಿ ಮಾತನಾಡಿದರು
ಯೂತ್ ಫೋರಂ ಅಧ್ಯಕ್ಷ ರಿಯಾಝ್ ಆರ್.ಕೆ ಮತ್ತು ಗೌರವಾಧ್ಯಕ್ಷ ಸಿರಾಜ್ ಅಭಯ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಝೀಕ್ ಕೊಣಾಜೆ, ನೌಶಾದ್ ಬಂಟ್ವಾಳ್ ,ನಝೀರ್ ಬಾರ್ಲಿ , ಇರ್ಶಾದ್ ಸೋಲಾರ್, ,ಸೆಮೀರ್ ಕೆಸಿ ಮೊದಲಾದವರು ಉಪಸ್ಥಿತರಿದ್ದರು
ರಾಝಿಕ್ ಆತೂರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸೋಷೀಯಲ್ ಪಾರೂಕ್ ವಂದಿಸಿದರು






