November 8, 2025
WhatsApp Image 2025-11-08 at 4.38.31 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಗೋವಿನ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಮೇಲೆ ಪೋಲಿಸ್ ಇಲಾಖೆಯ ಅತಿರೇಕಗಳು ಕಾನೂನಿನ ಪರಿಧಿಯನ್ನು ಮೀರುತ್ತಿದೆ.ಪೋಲಿಸರು ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದು, ಅಕ್ರಮವಾಗಿ ಸಂಘಪರಿವಾರ ಮಾಡುತ್ತಿದ್ದ ಕೆಲಸವನ್ನು ಇದೀಗ ಪೊಲೀಸರು ಕೈಗೆತ್ತಿಕೊಂಡು ಬಹಳ ಉತ್ಸಾಹದಿಂದ ಮಾಡಲು ಹೊರಟಿದ್ದು, ಗೋವು ವ್ಯಾಪಾರಿಗಳ ಮೇಲೆ ಶೂಟೌಟ್, ಗೋವು ಮಾರಾಟ ಮಾಡಿದವರ ಮನೆ ಜಪ್ತಿ , ಕಠಿಣ ಸೆಕ್ಷನ್ ಗಳಡಿಯಲ್ಲಿ ಕೇಸು ದಾಖಲಿಸಿ ಮುಸ್ಲಿಂ ಸಮುದಾಯವನ್ನು ಗುರಿಪಡಿಸುತ್ತಿದೆ. ಈ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯು ಇದರ ವಿರುಧ್ದ ತೀವ್ರಕಳವಳ ವ್ಯಕ್ತಪಡಿಸಿದೆ

ಸೆಕ್ಷನ್ 11(1) (d) ಯ 1960 ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ಕರ್ನಾಟಕ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ – 2020 ಜೊತೆಗೆ ಉಲ್ಲೇಖಿಸಿದಾಗ, ‘ಅಕ್ರಮ ವಧೆಯಲ್ಲಿ ಬಳಸುವ ದನಗಳ ಸಂಬಂಧ ಅವರಣಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡುತ್ತದೆ’ ಎಂದಿದೆ.
ಧರ್ಮಸ್ಥಳದ ಪ್ರಕರಣದಲ್ಲಿ ಸಾಗಾಟ ಮಾಡುವಾಗ ಬಂದಿಸಿಲಾಗಿದೆಯೇ ಹೊರತು ವದೆ ಮಾಡುವಾಗ ಅಲ್ಲ ಎಂಬದು ಗಮನಿಸಬೇಕಾದ ವಿಚಾರವಾಗಿದೆ. ಆದರೆ ಇಲ್ಲಿ ಮಾರಾಟ ಮಾಡಿದ ಮಹಿಳೆಯ ಮನೆ, ಏಜೆಂಟ್ ಮೂಲಕ ಯಾರು ಖರೀದಿಸಲು ಉದ್ದೇಶಿಸಿದ್ದಾನೋ ಆತನ ಮನೆಯನ್ನು ಸಹ ಜಪ್ತಿ ಮಾಡಲಾಗಿದೆ. ಮಾರಾಟಗಾರರಾಗಿರುವ ಝೊಹರ ರವರಿಗೆ ನೋಟಿಸ್ ಕೊಟ್ಟ ದಿವಸವೇ ಮನೆ ಜಪ್ತಿ ಮಾಡಲಾಗಿದೆ. ಕನಿಷ್ಟ ಅವರಿಗೆ ಕಾಲಾವಕಾಶವನ್ನು ಕೂಡ ನೀಡದೆ ಯು. ಪಿ ಮಾದರಿ ಕ್ರೂರ ರೀತಿಯಲ್ಲಿ ದ.ಕ ಪೊಲೀಸರು ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ಸಭೆಯು ಆರೋಪಿಸಿದೆ.

ಈಶ್ವರ ಮಂಗಳ ನಕಲಿ ಶೂಟೌಟ್ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಎಸ್.ಡಿ.ಪಿ.ಐ ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲು ಮಾಡುವಂತಹ ಯಾವುದೇ ವಿಚಾರಗಳು ಸಿಗದಿದ್ದಾಗ ಸಣ್ಣ ಪುಟ್ಟ ವಿಚಾರಗಳನ್ನು ಗುರಿಡಿಸಿಕೊಂಡು ನಾಯಕರ ಸೋಶಿಯಲ್ ಮೀಡಿಯಾ ಪೇಜ್ ಮೇಲೆ ಪ್ರಕರಣ ದಾಖಲಿಸಿ ಪ್ರತೀಕಾರ ರೂಪದಲ್ಲಿ ಕಾಂಗ್ರೆಸ್ ಸರ್ಕಾರ ಪೋಲಿಸರ ಮೂಲಕ ನಮ್ಮ ಹೋರಾಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದು ಸರಕಾರ ಮತ್ತು ಇಲಾಖೆಯ ದ್ವೇಷ ಸಾದಿಸುವ ತನ್ನ ಸಣ್ಣತನವನ್ನು ತೋರಿಸುತ್ತದೆ ಎಂಬುದು ಅರಿವಾಗುತ್ತದೆ

ಸದರಿ ಪ್ರಕರಣದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಸಾರ್ವಜನಿಕ ಎಕ್ಸ್ (x) ಅಭಿಯಾನದಲ್ಲಿ ವೈರಲ್ ಆಗುತ್ತಿದ್ದ ಖರೀದಿ ಬಿಲ್ ನಕಲಿ ಎಂದು ಆರೋಪಿಸಿ ಎಸ್‌.ಡಿ.ಪಿ.ಐ ರಾಜ್ಯ X ಅಧಿಕೃತ ಖಾತೆ ಮೇಲೆ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರ ಮುಖಪುಟದ ಪೇಜ್ ಮೇಲೆ ಪ್ರಕರಣ ದಾಖಲಾಗಿದೆ. ಒಂದು ವೇಳೆ ಈ ಬಿಲ್ ನಕಲಿಯಾಗಿದ್ದರೆ ಆ ಬಿಲ್ ನ್ನು ತಯಾರಿಸಿದವರ ಮೇಲೆ ಪೊಲೀಸ್ ಇಲಾಖೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಸಭೆ ಆಗ್ರಹಿಸಿದೆ.

ನಕಲಿ ಶೂಟೌಟ್ ಪ್ರಕರಣ ವಿಚಾರದಲ್ಲಿ ಪಕ್ಷವು ಪೋಲಿಸರ ನಡೆಯನ್ನು ಅಲ್ಲಗೆಳೆದು, ಹಲವಾರು ಗಂಭೀರ ಆರೋಪಗಳನ್ನು ಮಾಡಿತ್ತು. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬದಲಿಗೆ ಇಲಾಖೆಯಿಂದ ಆದ ತಪ್ಪುಗಳನ್ನು ಮರೆಮಾಚಲು ಆರೋಪ ಹೊರಿಸಿದವರ ಮೇಲೆ ಹಗೆ ತೀರಿಸಿ ಕೊಳ್ಳಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ಹಗೆ ಸಾಧನೆಯ ನಡೆಯಾಗಿದೆ ಎಂದು ಕಾರ್ಯದರ್ಶಿ ಮಂಡಳಿ ಸಭೆ ಅಭಿಪ್ರಾಯ ಪಟ್ಟಿದೆ.

ಬಿಜೆಪಿ ಸರ್ಕಾರ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷ, ಪ್ರಸ್ತುತ ಈ ಕರಾಳ ಕಾನೂನನ್ನು ರಾಜ್ಯದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ಜಾರಿಗೊಳಿಸುತ್ತಿದೆ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿ ಕೊಂಡು ಶೂಟೌಟ್, ಮನೆ ಜಪ್ತಿಯಂತಹ ಕಾನೂನು ಬಾಹಿರ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಸಭೆ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲೆಯಾದ್ಯಂತ ಹಲವಾರು ದ್ವೇಷ ಭಾಷಣ ಮಾಡುವ, ಸಂಘಟಿತ ಅಪರಾಧ ಮಾಡುವ ಹಿಂದುತ್ವವಾದಿ ನಾಯಕರ ಮೇಲೆ ಯಾಕೆ ಇಂತಹ ಕಠಿಣ ಕ್ರಮಗಳು ಜಾರಿಯಾಗುವುದಿಲ್ಲ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಕೇವಲ ಮುಸ್ಲಿಮರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಕಾನೂನು ಜಾಗೃತಿ ನೆಪ್ಪವೂಡ್ಡಿ ಮುಸ್ಲಿಂ ಸಮುದಾಯದ ಯುವಕರನ್ನು ಬೆದರಿಸುವ ಪೋಲಿಸ್ ಇಲಾಖೆ ಹಾಗೂ ಸರ್ಕಾರ ದ್ವೇಷ ಭಾಷಣ, ಸಂಘಟಿತ ಅಪರಾಧ ಹಾಗೂ ಇನ್ನಿತರ ಕ್ರಿಮಿನಲ್ ಪ್ರಕರಣದಲ್ಲಿರುವ ವ್ಯಕ್ತಿಗಳನ್ನು ಸಂಘಪರಿವಾರ ಪ್ರತಿನಿಧಿಸುವ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಯಾಕೆ ಅವರ ನಾಯಕರಿಗೆ, ಕಾರ್ಯಕರ್ತರಿಗೆ ಬುದ್ದಿ ಮಾತು ಹೇಳುವ ಧೈರ್ಯ ಮಾಡುವುದಿಲ್ಲ ಎಂದು ಸಭೆಯು ಪ್ರಶ್ನಿಸಿದೆ. ಜಾನುವಾರು ಪ್ರಕರಣದಲ್ಲಿ ಒಂದು ಸಮುದಾಯವನ್ನು ಅನಗತ್ಯವಾಗಿ ಗುರಿಪಡಿಸಿ ಈ ರೀತಿಯ ದೌರ್ಜನ್ಯ ಮುಂದುವರೆದರೆ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ತೀವ್ರ ರೀತಿಯ ಹೋರಾಟಗಳನ್ನು ಎದುರಿಸಬೇಕಾಗಬಹುದು ಎಂದು ಸಭೆ ಎಚ್ಚರಿಕೆ ನೀಡಿದೆ

About The Author

Leave a Reply