November 24, 2025
WhatsApp Image 2025-11-09 at 5.37.29 PM

17 ವರ್ಷದ ಸಹಪಾಠಿಯನ್ನು ಊಟಕ್ಕೆ ಕರೆಸಿ ಗುಂಡು ಹಾರಿಸಿದ್ದಕ್ಕಾಗಿ ಇಬ್ಬರು ಅಪ್ರಾಪ್ತ ವಯಸ್ಕರನ್ನು ಭಾನುವಾರ ಬಂಧಿಸಲಾಗಿದೆ. ಗುರುಗ್ರಾಮದ ಸೆಕ್ಟರ್ 48ರಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಸದರ್ ಪೊಲೀಸ್ ಠಾಣೆಗೆ ನಿಯಂತ್ರಣ ಕೊಠಡಿಯಿಂದ ಬಾಲಕನೊಬ್ಬನಿಗೆ ಗುಂಡು ಹಾರಿಸಿರುವ ಬಗ್ಗೆ ವರದಿ ಬಂದಿದೆ. ಸ್ಥಳಕ್ಕೆ ಆಗಮಿಸಿದ ಕೂಡಲೇ, ಬಲಿಪಶುವನ್ನ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಪೊಲೀಸರು ಘಟನಾ ಸ್ಥಳವನ್ನ ಭದ್ರಪಡಿಸಿಕೊಂಡು ಒಂದು ಪಿಸ್ತೂಲ್, ಒಂದು ಮ್ಯಾಗಜೀನ್, ಐದು ಲೈವ್ ಕಾರ್ಟ್ರಿಡ್ಜ್‌’ಗಳು ಮತ್ತು ಒಂದು ಖಾಲಿ ಶೆಲ್ ಕಾರ್ಟ್ರಿಡ್ಜ್ ಸ್ಥಳದಿಂದ ವಶಪಡಿಸಿಕೊಂಡರು. ಆರೋಪಿಯ ಕೋಣೆಯೊಳಗಿನ ಪೆಟ್ಟಿಗೆಯಿಂದ ಒಂದು ಮ್ಯಾಗಜೀನ್ ಮತ್ತು 65 ಲೈವ್ ಕಾರ್ಟ್ರಿಡ್ಜ್‌’ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಲ್ಲಿ ಒಬ್ಬನ ತಂದೆ ಆಸ್ತಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಇರಿಸಲಾಗಿದ್ದ ಆತನ ಪರವಾನಗಿ ಪಡೆದ ಪಿಸ್ತೂಲನ್ನ ದಾಳಿಗೆ ಬಳಸಲಾಗಿದೆ.

About The Author

Leave a Reply