

ಮಂಗಳೂರು: ಸುಮಾರು ಎಂಟು ವರ್ಷದ ಹಿಂದೆ ಕಾಣೆಯಾಗಿರುವ ನಗರದ ಕಾಲೇಜೊಂದರ ವಿದ್ಯಾರ್ಥಿಯ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಂದ ಮನವಿ ಮಾಡಿದ್ದಾರೆ.
18-04-2018ರಂದು ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪಿ.ಎ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್ ಅವರು ಕೊಣಾಜೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಕಾಸರಗೋಡು ಪಚ್ಚಕಾಡ್‌ನ ಸಲೀಂ ಕೆ.ಎಂ ಎಂಬವರ ಪುತ್ರ ಮೊಹಮ್ಮದ್ ಶಾಮೀಲ್ (21) 17-04-2018ರಂದು ಬೆಳಗ್ಗೆ 11.34ಕ್ಕೆ ಕಾಲೇಜಿನ ಪಾರ್ಕಿಂಗ್ ಪ್ರದೇಶಕ್ಕೆ ಬಂದು ಕಾಲೇಜಿನ ಒಳಗೆ ಪ್ರವೇಶಿಸದೆ ಹಾಗೂ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ.
ಇಷ್ಟರ ತನಕ ಆತನ ಇರುವಿಕೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 83/2018 ರಂತೆ ನಾಪತ್ತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕಾಣೆಯಾದ ಮೊಹಮ್ಮದ್ ಶಾಮೀಲ್ ಪತ್ತೆಯಾದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ, ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು ನಗರ ನಿಯಂತ್ರಣ ಕೊಠಡಿ (ದೂರವಾಣಿ: 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (ದೂರವಾಣಿ: 0824-2220536, 9091873198, 9535247535) ಗೆ ತಕ್ಷಣ ಸಂಪರ್ಕಿಸಲು ಮನವಿ ಮಾಡಲಾಗಿದೆ.






