January 17, 2026
WhatsApp Image 2025-11-14 at 9.17.37 AM

ಮೂಡಬಿದಿರೆಯ ಕಾಲೇಜೊಂದರಲ್ಲಿ ಕ್ಯಾಂಟೀನ್‌ ಕೆಲಸ ಮಾಡುತ್ತಿದ್ದ ಚೇತನ್‌ ಎಂಬವರನ್ನು ಕೊಲೆ ಮಾಡಿದ ಆರೋಪಿ ಚಿದಾನಂದ ಪರಶು ನಾಯ್ಕನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ.ಮೂಡಬಿದಿರೆಯ ಕಾಲೇಜೊಂದರ ಕ್ಯಾಂಟೀನ್‌ನಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿರುವ ಚೇತನ್ (22) ಮತ್ತು ಚಿದಾನಂದ ಎಂಬವರಿಗೆ ಗೆ ಕ್ಯಾಂಟೀನ್ ನಲ್ಲಿ ಕೆಲಸದ ವಿಚಾರದಲ್ಲಿ ಮತ್ತು ವೈಯುಕ್ತಿಕ ವಿಚಾರದಲ್ಲಿ ಪರಸ್ಪರ ತಕರಾರು ನಡೆದಿತ್ತು.

ಆರೋಪಿ ಚಿದಾನಂದ ಪರಶು ನಾಯ್ಕ ಎಂಬಾತನು 2020 ರ ಅ. 10 ರಂದು ಮಧ್ಯರಾತ್ರಿ ಚೇತನ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ ಹಿಡಿದುಕೊಂಡು ಚೇತನ್‌ ವಿಶಾಂತ್ರಿ ಕೊಠಡಿಗೆ ಅಕ್ರಮ ಪ್ರವೇಶ ಮಾಡಿದ್ದನು. ಅಲ್ಲಿ ರಾಜೇಶ್‌ ಪೂಜಾರಿ ಮತ್ತು ಶಂಕ್ರಪ್ಪ ಜತೆ ನಿದ್ರಿಸುತ್ತಿದ್ದ ಚೇತನ್‌ನನ್ನು ಅವಾಚ್ಯ ಶಬ್ದಗಳಿಂದ ಬೈದು ರಾಡ್‌ನಿಂದ ತಲೆಗೆ, ಮುಖಕ್ಕೆ ಹಲ್ಲೆ ಮಾಡಿದ್ದಲ್ಲದೇ ಮೊಬೈಲ್‌ ಫೋನ್‌ ಜಖಂಗೊಳಿಸಿದ್ದ.

ಗಂಭೀರ ಗಾಯಗೊಂಡಿದ್ದ ಚೇತನ್‌ ನ. 9 ರಂದು ಮೃತಪಟ್ಟಿದ್ದರು. ಈ ಬಗ್ಗೆ ಮೂಡುಬಿದಿರೆ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ನಡೆಸಿದ ಅಂದಿನ ಪೊಲೀಸ್‌ ನಿರೀಕ್ಷ ಬಿ.ಎಸ್‌ ದಿನೇಶ್ ಕುಮಾರ್‌ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿದ್ದರು.

ನ 1 ರಂದು ಆತನನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದು. ಪ್ರಕರಣದಲ್ಲಿ 40 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, ಇಂದು ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ,ಎನ್‌ ಅವರು ಜೀವಾವಧಿ ಶಿಕ್ಷೆಯನ್ನು ವಿಧಿಸಿದರು.

About The Author

Leave a Reply