

ಮಂಗಳೂರು: ಜೆಪ್ಪುವಿನ ಸಂತ ಜುಜೆ ವಾಜ್ ಹೋಂನ ಫಾ. ಡೆನಿಸ್ ಡಿಸೋಜ (91) ಅವರು ನವೆಂಬರ್ 16 ರಂದು ನಿಧನರಾಗಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾದ ಫಾ. ಡೆನಿಸ್ ಅವರು ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಚರ್ಚ್‌ಗೆ ಸೇವೆ ಸಲ್ಲಿಸಿದ್ದರು.
ಅವರು 1935ರ ಫೆಬ್ರವರಿ 15ರಂದು ತೊಡಂಬಿಲದಲ್ಲಿ (ಹಿಂದಿನ ಮೊಡಂಕಾಪ್) ಪಾಲ್ ಡಿಸೋಜಾ ಮತ್ತು ಮೇರಿ ಮ್ಯಾಗ್ಡಲೆನ್ ನೊರೊನ್ಹಾ ದಂಪತಿಯ ಪುತ್ರರಾಗಿ ಜನಿಸಿದ್ದರು. 1961ರ ಡಿಸೆಂಬರ್ 4 ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದರು.ಫಾ. ಡೆನಿಸ್ ಅವರು ಶಿರ್ವದಲ್ಲಿ ಸಹಾಯಕ ಧರ್ಮಗುರುಗಳಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ನಂತರ ಪಂಬೂರು, ಬೊಂದೆಲ್, ನಿಡ್ಡೋಡಿ, ಮುಕಾಮಾರ್, ಕ್ಯಾಸಿಯಾ, ಸುರತ್ಕಲ್ ಮತ್ತು ಸಂಪಿಗೆಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2010ರಲ್ಲಿ ನಿವೃತ್ತಿಯ ನಂತರ, ಅವರು ಬಿಷಪ್ಸ್ ಹೌಸ್‌ನಲ್ಲಿ ಮತ್ತು ನಂತರ ಜೆಪ್ಪುವಿನ ಸಂತ ಜುಜೆ ವಾಜ್ ಹೋಂನಲ್ಲಿ ವಾಸಿಸುತ್ತಿದ್ದರು.ಫಾ. ಡೆನಿಸ್ ಅವರ ಅಂತ್ಯಕ್ರಿಯೆ ನವೆಂಬರ್ 17ರಂದು ಬೆಳಗ್ಗೆ 10 ಗಂಟೆಗೆ ವ್ಯಾಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.ಮಂಗಳೂರು ಧರ್ಮಪ್ರಾಂತ್ಯವು ಫಾ. ಡೆನಿಸ್ ಅವರ ಸರಳತೆ, ಆಧ್ಯಾತ್ಮಿಕ ಉತ್ಸಾಹ ಮತ್ತು ಪ್ರಾಮಾಣಿಕ ಸೇವೆಯನ್ನು ಪ್ರೀತಿಯಿಂದ ಸ್ಮರಿಸುತ್ತದೆ. ಅವರ ಸಹೋದರರಾದ ಫಾ. ವೆಲೇರಿಯನ್ ಡಿಸೋಜಾ ಮತ್ತು ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಲಾಗಿದೆ.






