

ಮಂಗಳೂರು: ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ವಾರ್ಷಿಕ ಮಹಾ ಸಭೆ ಹಾಗೂ ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಕುಣಿಲ್ ಸ್ಕೂಲ್ ಕ್ಯಾಂಪಸ್ ನಲ್ಲಿ ನಡೆಯಿತು.
ಈ ಸಭೆಯಲ್ಲಿ ಕೊಣಾಜೆ ಪೊಲೀಸ್ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗರಾಜ್ ರವರು ಸಭೆಯನ್ನುದ್ದೇಶಿಸಿ ಡ್ರಗ್ ವಿರುದ್ದ ಮಾಹಿತಿ ನೀಡಿ ಮಾತನಾಡಿದರು.
ರಕ್ಷಣಾ ವೇದಿಕೆಯ ಗೌರವಾದ್ಯಕ್ಷರಾದ ಪಿ,ಯಸ್ ಮೌದಿನ್ ಕುಂಜ್ಞಿ ,ಮೌಶೀರ್ ಸಾಮಣಿಗೆ ,ಇಕ್ಬಾಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಹಾ ಸಭೆಯ ಅಧ್ಯಕ್ಷತೆಯನ್ನು ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹಾಶಿಮ್ ಬಂಡಸಾಲೆಯವರು ವಹಿಸಿದರು.
ನಂತರ ವಾರ್ಷಿಕ ಮಹಾ ಸಭೆಯ ಕಾರ್ಯಕ್ರಮದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವಕ ಮೌಶಿರ್ ಅಹ್ಮದ್ ಸಾಮಾನಿಗೆ ರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಪದಾಧಿಕಾರಿಯಾಗಿ ಉಪಾಧ್ಯಕ್ಷರಾಗಿ ಕುಂಞ ಮೋನು ನಾಟೆಕಲ್ ಹುಡ್ ಮತ್ತು ಇಕ್ಬಾಲ್ ಹುಬ್ಬಳ್ಳಿ ಪ್ರದಾನ ಕಾರ್ಯದರ್ಶಿಯಾಗಿ ಹನೀಫ್ ಪಿ. ಎಸ್ ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಮೌಲವಿ ಹಾಗೂ ಖಜಾಂಜಿ ಯಾಗಿ ಹನೀಫ್ ಶೈನ್ ಹಾಗು ಅಬೂಬಕ್ಕರ್ ದೋಹಾ ಬಾಗ್ ಅವರನ್ನು ಗೌರವ ಸಲಹೆಗಾರರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ರಝಾಕ್ ಶಾಲೀಮಾರ್ ಸೇರಿ ಕೆಳವರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು
ಕಾರ್ಯಕ್ರಮವನ್ನು ಆದೀಲ್ ಸೂಫಿ ನಿರೂಪಿಸಿ ವಂದಿಸಿದರು.






