November 24, 2025
WhatsApp Image 2025-11-18 at 10.30.54 AM

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜನಪ್ರಿಯಗೊಂಡಿದ್ದ ದೃಶ್ಯ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಕುಟುಂಬ ರಕ್ಷಿಸಿಕೊಳ್ಳಲು ನಿರ್ಮಾಣ ಹಂತದ ಪೊಲೀಸ್ ಠಾಣೆಯಲ್ಲಿಯೇ ಹೆಣ ಹೂತು ಹಾಕುತ್ತಾನೆ. ಈಗ ಅದೇ ಮಾದರಿಯಲ್ಲಿ ಇದೀಗ ಬೆಂಗಳೂರಿನಲ್ಲಿ ಇಂಜಿನಿಯರ್ ನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಹೌದು ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿ ಕೊಲೆ ಮಾಡಿ ನಾಟಕ ಮಾಡಿದ್ದಾನೆ.ಇಂಜಿನಿಯರನ್ನು ಕೊಲೆಗೈದು ಮೃತ ದೇಹವನ್ನು ಮನೆಯಲ್ಲಿಯೇ ಹಂತಕ ಹೂತು ಹಾಕಿದ್ದ. ಅತ್ತಿಬೆಲೆ ಪೊಲೀಸರ ತನಿಖೆಯ ವೇಳೆ ಕೊಲೆ ರಹಸ್ಯ ಇದೀಗ ಬಯಲಾಗಿದೆ.

ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ ಎನ್ನುವವರನ್ನು ಕೊಲೆ ಮಾಡಲಾಗಿದೆ. ಅತ್ತಿಬೆಲೆಯಲ್ಲಿ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಶ್ರೀನಾಥ್ ವಾಸವಿದ್ದರು. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್ ಶ್ರೀನಾಥ್ ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ ಪ್ರಭಾಕರ್ ಗೆ 40,00,000 ಹಣ ಕೊಟ್ಟಿದ್ದಾನೆ. ಇತ್ತೀಚಿಗೆ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಪ್ರಭಾಕರ್ ಗೆ ಕೇಳಿದ್ದಾನೆ.

ಆಗ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹಣ ಕೊಡುತ್ತೇನೆ ಬಾ ಅಂತ ಹೇಳಿ ಆಂಧ್ರದ ಕುಪ್ಪಂಗೆ ಶ್ರೀನಾಥ್ ನನ್ನ ಕರೆಸಿಕೊಂಡಿದ್ದರು. ಕುಪ್ಪಂಗೆ ಹೋಗುವ ಮುನ್ನ ಶ್ರೀನಾಥ್ ಪತ್ನಿಗೆ ಹೇಳಿ ಹೋಗಿದ್ದರು ತಲೆಗೆ ಸುತ್ತಿನಿಂದ ಹೊಡೆದು ಮನೆಯಲ್ಲಿ ಗುಂಡಿ ತೋಡಿ ಆತನ ಮೃತ ದೇಹವನ್ನು ಹೂತು ಹಾಕಿದ್ದಾರೆ. ಇದಕ್ಕೆ ಪ್ರಭಾಕರ್ ಗೆ ಸ್ನೇಹಿತ ಜಗದೀಶ್ ಸಾತ್ ಕೊಟ್ಟಿದ್ದ.

ಶ್ರೀನಾಥ್ ಪತ್ನಿ ಪ್ರಭಾಕರನನ್ನು ತಿಳಿದಾಗ ಆತ ಬಂದಿಲ್ಲ ಅಂತ ನಾಟಕ ಮಾಡಿದ್ದಾನೆ ಎರಡು ದಿನವಾದರೂ ಮನೆಗೆ ಬಾರದಿದ್ದಾಗ ಪತ್ನಿ ಅತ್ತಿಬೆಲೆ ಠಾಣೆಗೆ ದೂರು ನೀಡಿದ್ದಾರೆ ಅತ್ತಿಬೆಲೆ ಪೊಲೀಸರು ಪ್ರಭಾಕರ್ ಮತ್ತು ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ ವಶಕ್ಕೆ ಪಡೆದು ವಿಚಾರನೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕುಪ್ಪನ್ನ ಮನೆಯಲ್ಲಿ ಹಣ ಹೂತು ಹಾಕಿರುವ ಕುರಿತು ಬಾಯಿಬಿಟ್ಟಿದ್ದಾರೆ.

About The Author

Leave a Reply