

ಸ್ಥಳೀಯ ಸಂಸ್ಥೆ ಚುನಾವಣೆಗೆ ಪೂರ್ವಬಾವಿಯಾಗಿ ಸಂಘಟನೆ ಬಲವರ್ಧನೆಗೆ ಕ್ರಮವಹಿಸಲು ಪಂಚಾಯತ್ ರಾಜ್ ಸಭೆಯಲ್ಲಿ ಜಿಲ್ಲಾದ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಕರೆ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಭೆಯೂ ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಮಹತ್ವದ ಚುನಾವಣಾ ಪೂರಕವಾಗಿ ಸಭೆಯು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಂಘಟನೆಯ ಜಿಲ್ಲಾದ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಕೆಲವು ನಿರ್ಣಯವನ್ನು ಅಂಗೀಕರಿಸಲಾಯಿತು

ಪಂಚಾಯತ್ ರಾಜ್ ಕಾರ್ಯಪಡೆ ರಚನೆಯಾಗದ ಬ್ಲಾಕ್ ಗಳಲ್ಲಿ ನವೆಂಬರ್ ಅಂತ್ಯದೊಳಗೆ ಮಾಜಿ ಮತ್ತು ಹಾಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯ ಪಡೆ ರಚನೆಗೆ ಕ್ರಮ ಕೈಗೊಳ್ಳುವುದು.ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಒಂದು ಪ್ರದೇಶದಲ್ಲಿ ಕಾರ್ಯಪಡೆ ಸದಸ್ಯರನ್ನು ಒಟ್ಟುಗೂಡಿಸಿ ಒಂದು ದಿನದ ತರಬೇತಿ ಕಾರ್ಯಗಾರವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.
@ ಕಾರ್ಯಪಡೆ ಸದಸ್ಯರಿಂದ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೊದಲು,ಬಡವರ,ಮದ್ಯಮ ವರ್ಗದವರ ಬದುಕು ಕಟ್ಟಲು ಪ್ರಯೋಜನಕಾರಿಯಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಪಲಾನುಭವಿಗಳ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು.
ಇತಿಹಾಸದಲ್ಲಿ ಪ್ರಥಮ ಬಾರಿಗೆ ಪಂಚಾಯತ್ ಪ್ರತಿನಿಧಿಗಳ ಹಾಗೂ ಬ್ಲಾಕ್ ಅದ್ಯಕ್ಷರ ಶಿಪಾರಸ್ಸಿನಂತೆ ಕಳೆದ ಮೂರು ಅವಧಿಯ 6 ಕೋಟಿಯ ಅನುದಾನದ ಜೊತೆಗೆ ಇತರ ಅನುದಾನಗಳನ್ನು ಸಮರ್ಪಕವಾಗಿ ವಿತರಿಸಿ ಜಿಲ್ಲೆಯ ಬಹುತೇಕ ಗ್ರಾ.ಪಂಚಾಯತಿಗಳಿಗೆ ತಲಾ ಒಂದಾದರೂ ಅನುದಾನ ಒದಗಿಸಿಕೊಟ್ಟಿರುವುದಕ್ಕಾಗಿ ಮತ್ತು ವಿಧಾನಪರಿಷತ್ತಿನ ಹಕ್ಕು ಬಾದ್ಯತ ಸಮಿತಿ ಅದ್ಯಕ್ಷರಾಗಿ ನೇಮಕವಾಗಿರುವುದರ ಬಗ್ಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರಿಗೆ ಆಭಿನಂದನಾ ನಿರ್ಣಯ ಕೈಗೊಳ್ಳಲಾಯಿತು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾಗಿದ್ದ ಸಂದೇಶ್ ಶೆಟ್ಟಿ ಬಿಕ್ನಾಜೆ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ನೇಮಕವಾದ ಹಿನ್ನಲೆ,ನೂತನ ಬ್ಲಾಕ್ ಅದ್ಯಕ್ಷರಾಗಿ ಖ್ಯಾತ ಅಡ್ವಕೇಟ್ ಪಂಚಾಯತ್ ರಾಜ್ ಬಗ್ಗೆ ಅರಿವಿರುವ ಉಮ್ಮರ್ ಕೊಡಂಗೆ ಅವರನ್ನು ಮತ್ತು ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ರಜಾಕ್ ತೆಕ್ಕಾರು ಅವರಿಗೆ ಜವಬ್ದಾರಿ ವಹಿಸಿ ಆದೇಶ ಪತ್ರ ನೀಡಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ನಿಷ್ಕ್ರಿಯವಾಗಿರುವ ಪಧಾದಿಕಾರಿಗಳ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಕುಳಾಲು ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು.
ಈ ಸಭೆಯಲ್ಲಿ ಎಲ್ಲಾ ಪಧಾದಿಕಾರಿಗಳು ಬಾಗವಹಿಸಿ ಸಕಾರಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡರು.ಮುಡಿಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಹೈದರ್ ಕೈರಂಗಳ ಸ್ವಾಗತಿಸಿ, ಪ್ರದಾನ ಕಾರ್ಯದರ್ಶಿ ಜಗದೀಶ್ ಕೊಯಿಲ ವಂದಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕಿ ವೃಂದ ಪೂಜಾರಿ ಉಪಸ್ಥಿತಿತರಿದ್ದರು






