

ಬಂಟ್ವಾಳ: ಮಂಚಿ ಗ್ರಾಮ ಪಂಚಾಯತಿಗೆ ಸೇರಿದ 2016ರಲ್ಲಿ ಖರೀದಿಸಲಾದ ಮಹೇಂದ್ರ ಜೀತೊ ವಾಹನ ಹಳೆಯದಾಗಿ ಪದೇ–ಪದೇ ದೋಷ ಕಾಣಿಸಿಕೊಂಡು ದುರಸ್ತಿಗೆ ಹೆಚ್ಚಿನ ವೆಚ್ಚ ಹಾಗೂ 10 ದಿನಗಳ ಕಾಲ ವಾಹನ ಕಾರ್ಯನಿರ್ವಹಣೆ ನಿಂತು ಹೋಗುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತಿಗೆ ಹೆಚ್ಚುವರಿ ಆರ್ಥಿಕಭಾರ ಉಂಟಾಗುತ್ತಿದೆ.
ಈ ಸಮಸ್ಯೆಯನ್ನು ಗಮನಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಎಂ. ಇಬ್ರಾಹಿಂ ಅವರ ಶಿಫಾರಸಿನ ಮೇರೆಗೆ, ಸುಮಾರು ಎರಡು ತಿಂಗಳು ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಹಳೆ ವಾಹನವನ್ನು ಮಾರಾಟ ಮಾಡಿ ಪಂಚಾಯತ್ ಸ್ವಂತ ಅನುದಾನದಲ್ಲಿ ಹೊಸ ವಾಹನ ಖರೀದಿಸುವ ನಿರ್ಣಯ ಕೈಗೊಳ್ಳಲಾಯಿತು.
ಅದರಂತೆ, 25/08/2025 ರಂದು ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ಹೊಸ ವಾಹನ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, ಹೊಸ ವಾಹನಕ್ಕಾಗಿ ಶೋರೂಂ ಬುಕ್ಕಿಂಗ್ ಕೂಡ ಪೂರ್ಣಗೊಂಡಿದೆ. ಶೀಘ್ರದಲ್ಲೇ ಹೊಸ ವಾಹನ ಪಂಚಾಯತಿಗೆ ಲಭ್ಯವಾಗಲಿದ್ದು, ಸಾರ್ವಜನಿಕ ಉಪಯೋಗಕ್ಕೆ ಬಿಡಲಾಗುವುದು ಎಂದು ಪಂಚಾಯತ್ ಮೂಲಗಳಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಹಳೆಯ ಮಹೇಂದ್ರ ಜೀತೊ ವಾಹನದ ಮೌಲ್ಯಮಾಪನೆಗಾಗಿ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಪತ್ರ ಕಳುಹಿಸಲಾಗಿದ್ದು, ಮೌಲ್ಯಮಾಪನ ವರದಿ ದೊರಕುತ್ತಿದ್ದಂತೆಯೇ ಹಳೆ ವಾಹನ ಮಾರಾಟ ಕ್ರಮ ಆರಂಭಗೊಳ್ಳಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.






