January 17, 2026
WhatsApp Image 2025-11-21 at 12.29.14 PM

ಬಿಜೆಪಿ ಮುಖಂಡ ಮಣಿಕಂಡ ರಾಟೋಡ್ ಮತ್ತೆ ಅರೆಸ್ಟ್ ಆಗಿದ್ದಾನೆ. ಜೇವರ್ಗಿ ತಾಲೂಕಿನ ನೆಲೋಗಿ ಠಾಣೆ ಪೋಲಿಸರಿಂದ ಮಣಿಕಂಠ ರಾಠೋಡ್ನನ್ನು ಬಂಧಿಸಲಾಗಿದ್ದು, ತಡರಾತ್ರಿ ಬಂಧಿಸಿ ಮಣಿಕಂಠ ರಾಠೋಡ್ ನನ್ನ ನ್ಯಾಯಾಂಗಕ್ಕೆ ಪೊಲೀಸ್ರು ಒಪ್ಪಿಸಿದ್ದಾರೆ.

ಕೊಲೆ ಯತ್ನದ ಆರೋಪದ ಅಡಿ ಮಣಿಕಂಠ ರಾಠೋಡ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಮಣಿಕಂಠ ರಾಠೋಡ್ ನನ್ನ ಅರೆಸ್ಟ್ ಮಾಡಿದ್ದಾರೆ. ನಾಟಿ ಔಷಧಿ ಕೊಡುತ್ತಿದ್ದಂತಹ ರಶೀದ್ ಮುತ್ಯಾ ಬಂಧನಕ್ಕೆ ಅಗ್ರಹಿಸಿದ್ದ ಮಣಿಕಂಠ ರಾಠೋಡ್ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮಕ್ಕೆ ತೆರಳಿ ಹೈಡ್ರಾಮಾ ಮಾಡಿದ್ದ.

ತನ್ನ ಬೆಂಬಲಿಗರ ಜೊತೆ ಸೇರಿ ಗಲಾಟೆ ಮಾಡಿದ್ದ. ಬೆಂಬಲಿಗರ ಜೊತೆ ಸೇರಿ ಹಲ್ಲೆ ಮಾಡಿದ್ದು ಅಲ್ಲದೆ ರಶೀದ್ ಮುತ್ಯಾನ ಕಾರು ಚಾಲಕನಿಗೂ ಕೂಡ ಗಲಾಟೆ ವೇಳೆ ಕಲ್ಲೇಟು ತಗುಲಿದ್ದು, ರಶೀದ್ ಮುತ್ಯ ದೂರಿನ ಮೇರೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

About The Author

Leave a Reply