January 17, 2026
55

ಮಂಗಳೂರು ನಗರದಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗಿದ್ದು , ನಗರದಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ.ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವುದು ಕೂಡ ಒಂದು ಕಾರಣ.

ನಗರದಲ್ಲಿ ಹೆಚ್ಚಿನ ಕಟ್ಟಡಗಳಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಈ ಕಾರಣಕ್ಕಾಗಿ ಗ್ರಾಹಕರು ನಗರದ ಮುಖ್ಯ ರಸ್ತೆ ಬದಿಯಲ್ಲಿ ಗಾಡಿ ಪಾರ್ಕ್ ಮಾಡುತ್ತಾರೆ.
ಸ್ಟೇಟ್ ಬ್ಯಾಂಕ್ ನ ರಾವ್ ಅಂಡ್ ರಾವ್ ಸರ್ಕಲ್ ಬಳಿ ಕಂಡು ಬಂದ ದೃಶ್ಯ. ಇಲ್ಲಿ ಪುಟ್ ಪಾತ್ ಇರುವುದು ಜನರಿಗೆ ನಡೆದಾಡಲು, ಆದರೆ ಇಲ್ಲಿ ಪಾದಚಾರಿಗಳು ಪುಟ್ ಪಾತ್ ನಲ್ಲಿ ನಡೆದಾಡಲು ಸಾಧ್ಯವೇ ಇಲ್ಲದಂತಾಗಿದೆ. ಕಾರಣ ಪುಟ್ ಪಾತ್ ನಲ್ಲಿಯೇ ವಾಹನ ನಿಲ್ಲಿಸಿ ಹೋಗುತ್ತಾರೆ.

ಇಲ್ಲಿನ ಈ ಅವ್ಯವಸ್ಥೆಯ ಬಗ್ಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಟ್ರಾಫಿಕ್ ಪೋಲೀಸರು ಇಲ್ಲಿಗೆ ಸುಲಿಯೋದೆ ಇಲ್ಲ. ಮಂಗಳೂರು ನಗರದಲ್ಲಿ ಸುಗಮ ಸಂಚಾರ ಮಾಡಬೇಕಾದರೆ ಇಂತಹ ಅವ್ಯವಸ್ಥೆ ನಗರದ್ಯಂತ ಇದೆ. ಇದಕ್ಕೆ ಮಂಗಳೂರು ಸಂಚಾರಿ ಪೊಲೀಸರು ಕಡಿವಾಣ ಹಾಕಬೇಕೆಂದು ಸಾರ್ವಜನಿಕ ರ ಆಗ್ರಹ.

About The Author

Leave a Reply