

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ.
ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಈತನ ತಂದೆ ಪ್ರವೀಣ್ ಜೋಗಿ ಮತ್ತು ತಾಯಿ ಕಾವ್ಯ ಅವರು ಸಹ ಈ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪುತ್ರ ಸಹ ಅವರದ್ದೇ ದಾರಿ ಹಿಡಿದಿದ್ದಾನೆ.
ಮೃತ ಪ್ರತೀಕ್ ಸಹೋದರಿ, ಚಿಕ್ಕಪ್ಪನನ್ನು ಅಗಲಿದ್ದಾನೆ.






