December 21, 2025
WhatsApp Image 2025-11-25 at 2.50.22 PM

ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ನಗರದ ಮಧ್ಯಭಾಗದ ಪ್ರಮುಖ ರಸ್ತೆಯಲ್ಲಿದ್ದ ಬೃಹತ್ ಹೊಂಡವೊಂದನ್ನು ಸ್ವತಃ ತಮ್ಮ ಖರ್ಚಿನಲ್ಲಿ ಸಾಮಗ್ರಿ ತರಿಸಿ, ತಾವೇ ಕಾಂಕ್ರೀಟ್ ಕಲಸಿ ಮುಚ್ಚುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಕೂರ್ನಡ್ಕದ ರಸ್ತೆ ಗುಂಡಿಯನ್ನು ಮುಚ್ಚುವಂತೆ 3 ತಿಂಗಳ ಹಿಂದೆ ದಿಢೀರಣೆ ಪ್ರತಿಭಟನೆ ಮತ್ತು ಹಲವಾರು ಬಾರಿ ಪುತ್ತೂರು ನಗರ ಸಭೆಗೆ ಹಾಗೂ ,ಸ್ಥಳೀಯ ಕೌನ್ಸಿಲರ್ ಜನಪ್ರತಿನಿದಿಗಳಿಗೆ ಮನವಿ ಕೊಟ್ಟು ಏನೂ ಪ್ರಯೋಜನವಾಗದಿದ್ದಾಗ ಕೊನೆಗೆ ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತರಾದ ಹಕೀಮ್ ಕೂರ್ನಡ್ಕ ಸಿರಾಜ್ ಎ. ಕೆ ಮತ್ತು ಯಹಿಯ ಕೆ ಎಚ್ ಕೂರ್ನಡ್ಕ ಕಾಂಕ್ರೀಟೀಕರಣ ಮಾಡಿ ಗುಂಡಿಯನ್ನು ಮುಚ್ಚಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇವರು ಮಾಡಿದ ಕೆಲಸಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Author

Leave a Reply