November 28, 2025
WhatsApp Image 2025-11-27 at 9.12.43 PM

ಪುತ್ತೂರು: ಇಂದುನಡೆದ ದಿಢೀರ್ ಬೆಳವಣಿಗೆಯಲ್ಲಿ ಪುತ್ತೂರು ಬಿಜೆಪಿ ಮಂಡಲದಲ್ಲಿ ಮೇಜರ್ ಸರ್ಜರಿ ನಡೆದಿತ್ತು. ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲಗಳಿಗೆ ತಲಾ ಇಬ್ಬರಂತೆ, ಒಟ್ಟು ನಾಲ್ವರು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ಬಿಜೆಪಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ನಡೆ ಮೂಲಕ ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಪಕ್ಷದ ಅಯಕಟ್ಟಿನ ಹುದ್ದೆ  ಅಲಂಕರಿಸಿದ್ದ  ಮೂವರು ನಾಯಕರಿಗೆ ಪರೋಕ್ಷವಾಗಿ ಗೇಟ್‌ ಪಾಸ್‌ ನೀಡಲಾಗಿತ್ತು.

ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾದ ನಾಯಕರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಮಣೆ ಹಾಕಿದೆ. ಟ್ರಸ್ಟ್‌ನ ಮುಂದಿನ ಸಂಘಟನಾ ಅವಧಿಗೆ ನೂತನ ಪದಾಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಲಾಗಿದೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಯಾಗಿ ಉಮೇಶ್ ಕೋಡಿಬೈಲ್: ಸಹಸಂಘಟನಾ ಕಾರ್ಯದರ್ಶಿಯಾಗಿ ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ನೇಮಕಗೊಳಿಸಲಾಗಿದೆ.

 ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿಯನ್ನು ಈ ನಾಯಕರಿಗೆ ನೀಡಲಾಗಿದೆ.

About The Author

Leave a Reply