November 28, 2025
WhatsApp Image 2025-11-28 at 10.43.24 AM

ಇಸ್ಲಾಮಾಬಾದ್‌: ರಾವಲ್ಪಿಂಡಿಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಜೈಲಿನಲ್ಲಿಯೇ ಹತ್ಯೆ ಮಾಡಲಾಗಿದೆ ಎಂಬ ವದಂತಿಯೊಂದು ಹರಿದಾಡಿದೆ.

ಈ ನಡುವೆ ಇಮ್ರಾನ್‌ರನ್ನು ಕಾಣಲು ಬಂದ ಸಹೋದರಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇಲ್ಲಿನ ಡಿಯಾಲಾ ಜೈಲಿನಲ್ಲಿ ಇಮ್ರಾನ್‌ರನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿ ಹರಿದಾಡಿದ್ದು, ಆಫ್ಘಾನ್‌ನಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸುದ್ದಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಇಮ್ರಾನ್ ಬೆಂಬಲಿಗರು ಜೈಲಿಗೆ ನುಗಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವದಂತಿಗಳ ಬಗ್ಗೆ ಪಾಕ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ತಮ್ಮ ಸಹೋದರನ ಕಾಣಲು ಹಲವು ವಾರಗಳಿಂದ ಪ್ರಯತ್ನಿಸಿದರೂ ಅವಕಾಶ ನೀಡಿಲ್ಲ. ಜೈಲಿನಲ್ಲಿಯೇ ಕೊಲೆ ಮಾಡಲಾಗಿದೆ ಎಂದು ಇಮ್ರಾನ್‌ರ ಮೂವರು ಸಹೋದರಿಯರು ಆರೋಪಿಸಿದ್ದಾರೆ. ಜತೆಗೆ ಸೋದರನ ಕಾಣಲು ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

About The Author

Leave a Reply