November 28, 2025
WhatsApp Image 2025-11-28 at 3.45.51 PM

ಬಂಟ್ವಾಳ: ಎಸ್‌ ವಿ ಎಸ್‌ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾರ್ಶ ಮೈದಾನದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಝಾ ಫಾತಿಮಾ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇವಳು, ಹಿಂದಿ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಫಾತಿಮಾ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾಳೆ.

ಈ ವಿದ್ಯಾರ್ಥಿನಿಯರಿಗೆ ಶಾಲೆಯ ಮುಖ್ಯಗುರು ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಶಿಕ್ಷಕಿ ಭಾರತಿ ಕೈರಂಗಳ ಅವರು ವಿಶೇಷ ತರಬೇತಿ ನೀಡಿದ್ದು, ಶಿಕ್ಷಕರಾದ ಅಬ್ದುಲ್ ರಫೀಕ್, ಶರತ್ ಕುಮಾರ್, ಕ್ಷಮಾ ಕುಮಾರಿ, ಶುಭ, ಪವಿತ್ರ ಹಾಗೂ ಅನಿಲ್ ಅವರು ಸಹಕರಿಸಿದ್ದಾರೆ.

About The Author

Leave a Reply