February 12, 2026
WhatsApp Image 2025-11-29 at 9.45.23 AM

ಮಂಗಳೂರು: ಇಲ್ಲಿನ ಪಣಂಬೂರು ಬೀಚ್‌ನಲ್ಲಿ ಚಿನ್ನಾಭರಣಗಳಿದ್ದ ಬ್ಯಾಗ್ ಕಳವುಗೈದ ಅಪ್ರಾಪ್ತ ವಯಸ್ಸಿನ ಹುಡುಗನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಕಳವು ಗೈಯ್ಯಲಾಗಿದ್ದ 12 ಗ್ರಾಂ ತೂಕದ ಚೈನ್, 2 ಗ್ರಾಂ ತೂಕದ ಲಾಕೆಟ್, ತಲಾ 2 ಗ್ರಾಂ ತೂಕದ ಎರಡು ಉಂಗುರ ಮತ್ತು 4 ಗ್ರಾಂ ತೂಕದ ಕಿವಿಯೋಲೆ ಹಾಗೂ ರಿಯಲ್‌ಮಿ ಕಂಪೆನಿಯ ಮೊಬೈಲ್ ಪೋನ್-1, ಸ್ಯಾಂಸಂಗ್ S24 ಅಲ್ಮಾ ಮೊಬೈಲ್ ಪೋನ್-1 ಸೇರಿ ಒಟ್ಟು 3.33 ಲಕ್ಷ ರೂ.ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ವಾತಿ ನಂದಿಪಳ್ಳಿ ಎಂಬವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಅವರೊಂದಿಗೆ ಬೆಳಿಗ್ಗೆ ಪಣಂಬೂರು ಬೀಚಿಗೆ ಬಂದವರು ಕಪ್ಪು ಬಣ್ಣದ ಬ್ಯಾಗ್ ವೊಂದರಲ್ಲಿ ಮೊಬೈಲ್ ಫೋನ್‌ಗಳು, ಚಿನ್ನಾಭರಣಗಳನ್ನು ಹಾಕಿ ಸಮುದ್ರ ತೀರದಲ್ಲಿಟ್ಟು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಯಾರೋ ಕಳ್ಳ ಬ್ಯಾಗ್ ಸಮೇತ ಚಿನ್ನಾಭರಣ ಮೊಬೈಲ್ ಕಳವುಗೈದಿದ್ದಾಗಿ ಸ್ವಾತಿ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ನ.24ರಂದು ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು 48ಗಂಟೆಯೊಳಗೆ ಕಳ್ಳನನ್ನು ಬಂಧಿಸಿ, ಕಳವಾಗಿದ್ದ ಎಲ್ಲಾ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

About The Author

Leave a Reply