December 3, 2025
WhatsApp Image 2025-11-29 at 3.36.52 PM

ಮುಡಿಪುವಿನ ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯ ವಾರ್ಷಿಕ ಅಥ್ಲೆಟಿಕ್ ಮೀಟ್‌ನ್ನು 27-11-25 ರಂದು ಹೂಹಾಕುವಕಲ್ಲು ಮೈದಾನದಲ್ಲಿ ಭವ್ಯವಾಗಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಿ. ರಾಜೇಶ್ ಹಾಗೂ ಅಂತರಾಷ್ಟ್ರೀಯ ಅಥ್ಲೀಟ್ ಸರಸ್ವತಿ ಕಾಮತ್ ಹಾಜರಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾದ ಮಜೀದ್ ಎಂ ಎ , ಕರಸ್ಪಾಂಡೆಂಟ್ ನಹದ ಎಂ , ಆಡಳಿತಾಧಿಕಾರಿ ಮೊಯಿದೀನ್, ವಕೀಲರಾದ ಮಹಮ್ಮದ್ ಅಸ್ಗರ್, ಮುಖ್ಯೋಪಾಧ್ಯಾಯಿನಿ ಸಫೂರಾ, ಪಿಟಿಎ ಅಧ್ಯಕ್ಷ ಹನೀಫ್ ಹಾಗೂ ಹಿತೈಷಿ ಹಸನ್ ಉಪಸ್ಥಿತರಿದ್ದರು.

ಮಕ್ಕಳು ವಿವಿಧ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಓಟ, ಲಾಂಗು ಜಂಪ್, ಥ್ರೋ ಬಾಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮೆರೆದಿತ್ತು . ಪಾಲಕರಿಗಾಗಿ ಆಯೋಜಿಸಿದ ಮನರಂಜನಾ ಆಟಗಳು ಮತ್ತು ಹಳೆಯ ವಿದ್ಯಾರ್ಥಿಗಳ ಅಲ್್ಯೂಮಿನಿ ಪಂದ್ಯಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಹೆಚ್ಚಿಸಿವೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಸಹಕರಿಸಿದರು.

About The Author

Leave a Reply