

ಮಂಗಳೂರು: ಗಾಂಜಾ ಸೇವಿಸಿ ಕುದ್ರೋಳಿಯ ಗ್ರೀನ್ ಪಾರ್ಕ್ ಸಮೀಪ ತೂರಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಎಂಬಾತನೇ ಬಂಧಿತ ಆರೋಪಿ.
ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದ ಅವನನ್ನು ಗಸ್ತು ಪೊಲೀಸರು ಗಮನಿಸಿ, ವಶಕ್ಕೆ ಪಡೆದಿರುವುದಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






