January 17, 2026
WhatsApp Image 2025-12-03 at 9.21.00 AM

2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕರ ಶವ ಕಾಲುವೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿಯ ನಿವಾಸಿಗಳಾದ ಭರತ್ ರಾಜ್. ಶ್ಯಾಮ್ (22) ಹಾಗೂ ಪ್ರತಾಪ್ (18) ಸಾವನ್ನಪ್ಪಿದ ಯುವಕರು. ಇವರಿಬ್ಬರು ಬೈಕಿನಲ್ಲಿ ಹೋಗಿದ್ದು, ರಾತ್ರಿ ಮನೆಗೆ ಆತಂಕಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಂಗಳವಾರ ಕೆ.ಆರ್.ನಗರದ ಬಳಿಯ ಆರ್.ಎಂ.ಸಿ. ಬಳಿಯ ಕಾಲುವೆಯಲ್ಲಿ ಯುವಕರ ಶವವನ್ನು‌ ಕಂಡವರು ನೀಡಿದ ಮಾಹಿತಿ ಮೇರೆಗೆ ಕೆ.ಆರ್.ನಗರ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಶವ‌ ಮೇಲಕ್ಕೆತ್ತಿ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಸಂಬಂದ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply