December 3, 2025
WhatsApp Image 2025-12-03 at 5.20.03 PM

ಉಳ್ಳಾಲ: ಮಸೀದಿಗೆಂದು ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪುತ್ರಿ ದೂರು ದಾಖಲಿಸಿದ್ದಾರೆ.

ಅಬ್ದುಲ್‌ ಆಸೀಫ್‌ (47 ) ನಾಪತ್ತೆಯಾದವರು. ವಿದೇಶದಲ್ಲಿ ಆರ್ಟಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು 8 ದಿನಗಳ ಹಿಂದೆ ಮನೆಗೆ ಬಂದು ಮನೆಯಲ್ಲಿದ್ದವರು ನ 28 ರಂದು ದಾರಂದಬಾಗಿಲು ಮಸೀದಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ.

ಇವರಿಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪುತ್ರಿ ರೀಮಾ ಫಾತಿಮ ಎಂಬವರು ನೀಡಿರುವ ದೂರಿನ ಆಧಾರದಡಿ ನಾಪತ್ತೆ ದೂರು ದಾಖಲಾಗಿದೆ.

ಇಬ್ಬರು ಪುತ್ರಿಯರು ಹಾಗೂ ಪತ್ನಿ ಜೊತೆಗೆ ಅಬ್ದುಲ್‌ ಆಸೀಫ್‌ ವಾಸಿಸುತ್ತಿದ್ದರು.

About The Author

Leave a Reply