

ಬಂಟ್ವಾಳ: ಇಂದು ಮದುಮೆ ಸಂಭ್ರಮದಲ್ಲಿದ್ದ ಕುಟುಂಬವೊಂದು ಆಘಾತಕ್ಕೆ ಒಳಗಾದ ಘಟನೆ ಬಿ.ಸಿ. ರೋಡಿನ ಪಲ್ಲಮಜಲಿನಲ್ಲಿ ನಡೆದಿದೆ. ಮಹರ್ ಚಿನ್ನ ಮತ್ತು ಐಷಾರಾಮಿ ಗಿಫ್ಟ್-ಗಳನ್ನು ದೋಚಿ ಪ್ರಿಯಕರನ ಜೊತೆ ಮದುಮಗಳು ಪರಾರಿಯಾಗಿದ್ದಾಳೆ.
ದಿನಾಂಕ 12/12/2025ನೇ ಶುಕ್ರವಾರ ನಿಕಾಹ್ ನಡೆದಿದ್ದ ಮದುವೆ ಸಮಾರಂಭವು ಇಂದು 14/12/2025ನೇ ಆದಿತ್ಯವಾರ ತೊಕ್ಕೊಟ್ಟು ಯುನಿಟಿ ಹಾಲಿನಲ್ಲಿ ನಡೆಯಬೇಕಿತ್ತು. ವರನು ನಿಶ್ಚಿತಾರ್ಥಕ್ಕೆ ನೀಡಿದ್ದ 2 ಲಕ್ಷ ಬೆಲೆಬಾಲುವ iPhone Mobile, 7 ಪವನ್ ಚಿನ್ನಾಭರಣ, ಐಷಾರಾಮಿ ಗಿಫ್ಟ್-ಗಳನ್ನು ಹಾಗೂ ನಿಕಾಹ್-ಗೆ ನೀಡಿದ್ದ 10 ಪವನ್ ಮಹರ್ ಚಿನ್ನಗಳನ್ನು ದೋಚಿ ತನ್ನ ಪ್ರಿಯಕರನ ಜೊತೆ ಇಂದು ಮುಂಜಾನೆ 4 ಗಂಟೆಗೆ ಪರಾರಿಯಾಗಿರುತ್ತಾಳೆ. ಈ ಸಂಬಂಧ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






