

ಕೇಂದ್ರ ಸರಕಾರ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಹೆಸರನ್ನು ಬದಲಾಯಿಸಿ ಹೊಸ ಯೋಜನೆಯೆಂದು ಬಿಂಬಿಸಿ ಜನರನ್ನು ಮರಳು ಮಾಡುವ ಕಾರ್ಯವನ್ನು ಈವರೆಗು ಮಾಡುತ್ತಾ ಬಂದಿದ್ದು,ಇದೀಗ ಇದಕ್ಕೆ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಸೇರ್ಪಡೆಗೊಳಿಸುವ ಮೂಲಕ ಇತಿಹಾಸ ತಿರುಚುವ ಕೆಲಸಕ್ಕೆ ಕೈ ಹಾಕಿರುವುದು ಮಾತ್ರವಲ್ಲದೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಮಾಡಿದ ಅವಮಾನವಾಗಿರುತ್ತದೆ.ಈ ಹಿಂದೆ ಪೂರ್ಣ ಪ್ರಮಾಣದ ಅನುದಾನವನ್ನು ಕಾಂಗ್ರೆಸ್ ಸರಕಾರ ನೀಡುತ್ತಿದ್ದು,ಇದನ್ನು ಕಡಿತಗೊಳಿಸಿ ರಾಜ್ಯ ಸರಕಾರಗಳಿಗೆ ಪಾಲು ಅನುಪಾತ 60:40 ಮಾಡಿರುವುದು ಕೂಡ ರಾಜ್ಯಗಳಿಗೆ ಹೊರೆಯಾಗುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಪತ್ರೀಕಾ ಹೇಳಿಕೆಯ ಮೂಲಕ ತಿಳಿಸಿರುತ್ತಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಮನಮೋಹನ್ ಸಿಂಗ್ ನೇತೃತ್ವದ ಮತ್ತು ಅದಕ್ಕಿಂತಲೂ ಹಿಂದಿನ ಪ್ರದಾನ ಮಂತ್ರಿಗಳ ಬಡವರ ಕಲ್ಯಾಣಕ್ಕಾಗಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೈಗೊಂಡಿರುವಂತಹ ರಾಷ್ಟ್ರೀಯ ಆರೋಗ್ಯ ಮಿಷನದ,ಇಂದಿರಾ ಅವಾಸ್ ಯೋಜನೆ, ಆಹಾರ ಭದ್ರತಾ ಕಾಯಿದೆ,ಸರ್ವಶಿಕ್ಷಣ ಅಭಿಯಾನ,ಸ್ವಚ್ಛ ಭಾರತ್,ಇತ್ಯಾದಿ ಮಹತ್ವಾಕಾಂಕ್ಷಿ ಯೋಜನೆಗಳ ಹೆಸರನ್ನು ಬದಲಾಯಿಸಿ ‘ಹಳೆ ಮದ್ಯವನ್ನು ಹೊಸ ಬಾಟಲಿನಲ್ಲಿ ಹಾಕಿ ಮಾರಟ ಮಾಡಿದಂತೆ’ ಯಾವುದೇ ಹೆಚ್ಚುವರಿ ಅನುದಾನಗಳನ್ನು ನೀಡದೆ,ನಿಯಮಗಳನ್ನು ಕೂಡ ಯೋಜನೆ ಜನಪರವಾಗಿ ಅನುಷ್ಠಾನವಾಗದ ರೀತಿಯಲ್ಲಿ ಬದಲಾವಣೆ ಮಾಡಿ,ರಾಷ್ಟ್ರೀಯ ಯೋಜನೆಗಳಲ್ಲಿ ಬಹುಪಾಲು ರಾಜ್ಯ ಸರಕಾರದ ಪಾಲು ಬಂಡವಾಳದ ಶರ್ತಕ್ಕೊಳಪಟ್ಟು ತನ್ನದೆ ಯೋಜನೆಯೆಂಬಂತೆ ಪ್ರದಾನಮಂತ್ರಿ ಯೋಜನೆಯನ್ನು ಘೋಷಣೆ ಮಾಡಿರುವುದು ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವಾಗಿದೆ.ಯೋಜನೆಗಳ ಯಶಸ್ಸಿನಲ್ಲಿ ನರೇಂದ್ರ ಮೋದಿಯವರ ವಿಕಸಿತ ಭಾರತವೆಂದು ಜಂಭ ಕೊಚ್ಚಿಕೊಳ್ಳುವ ಬಿಜೆಪಿ ಕಾರ್ಯಕರ್ತರು ವಿಫಲತೆ ಕಂಡಾಗ ರಾಜ್ಯ ಸರಕಾದ ಕಡೆ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ಈವರೆಗೆ ನಿಜಾರ್ಥದಲ್ಲಿ ಭಾರತವನ್ನು ಸದೃಡ ಕಾರ್ಯಕ್ರಮಗಳ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕಾಂಗ್ರೆಸ್ ಪ್ರದಾನ ಮಂತ್ರಿಗಳ ಹೆಸರಿ ಕಂಡಾಗ ಅಸೂಯೆಯಾಗುತ್ತಿದ್ದು,ಈಗ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೂಡ ಸಹಿಸಲು ಅಸಾದ್ಯವಾದ ಸ್ಥಿತಿ ಬಂದಿರುವುದು ಶೋಚನೀಯ ! ರಾಷ್ಟ್ರಭಕ್ತಿಯಲ್ಲಿ ನಾವೇ ಶ್ರೇಷ್ಠರೆಂದು ಜಂಭ ಕೊಚ್ಚಿಕೊಳ್ಳುವ ಇವರು ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಿದ ರಾಷ್ಟ್ರೀಯ ನಾಯಕರನ್ನು ಕಾಂಗ್ರೇಸಿನವರು ಎಂಬ ಒಂದೇ ಕಾರಣಕ್ಕೆ ಅಪಮಾನಿಸುತ್ತಿರುವುದು ಭಾರತೀಯರನ್ನು ಅಣಕಿಸುವಂತಿದೆ.ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸರಕಾರಿ ಉದ್ದಿಮೆಗಳು ಮತ್ತು ಮೂಲಭೂತ ಸೌಕರ್ಯದ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿರುವುದು ಹಾಗೂ ಯೋಜನೆಗಳ ಹೆಸರು ಬದಲಾವಣೆ ಮಾಡಿರುವುದೇ ವಿಕಸಿತ ಭಾರತ ಎಂಬ ಕಲ್ಪನೆ ಬಿಜೆಪಿಯವರದ್ದಾಗಿದೆ.ಎಂದು ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಟೀಕೀಸಿದರು.






