January 17, 2026
ffs

ವಿಟ್ಲ: ಮನೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿ ಸುಟ್ಟು ಬಸ್ಮವಾದ ಘಟನೆ ಇಂದು ಕನ್ಯಾನದಲ್ಲಿ ಮಧ್ಯಾಹ್ನ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಸ್ಥಳಿಯರು ಬೆಂಕಿ ನಂದಿಸಲು ಪ್ರಯತ್ನಿಸಿದರು, ನಂತರ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಘಟನೆಯ ಸುತ್ತಲೂ ನೀರಿ ಹರಿಸಿ ಬೆಂಕಿ ನಂದಿಸಿದರು.

ಇಂದು ಶುಕ್ರವಾರ ಆದ ಕಾರಣ ಮಸಿದಿಗೆ ತೆರುಳುತ್ತಿದ್ದ ಮುಸ್ಲಿಂ ಯುವಕರು ತಕ್ಷಣವೇ ಧಾವಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್ ಪಂಜಾಜೆ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಪರಿಹಾರ ನೀಡಿ. ದಿನಸಿ ಸಾಮಗ್ರಿಗಳು ಒದಗಿಸಿ ಮಾನವೀಯತೆ ಮೆರೆದರು.

About The Author

Leave a Reply