

ಧರ್ಮಸ್ಥಳ ವಿರುದ್ಧ ಷಡ್ಯಂತರ ಹಾಗೂ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಆರೋಪಿ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ ಬಿಡುಗಡೆ ಬಳಿಕ ಆರೋಪಿ ಚಿನ್ನಯ್ಯ ಐವರ ವಿರುದ್ಧ ಜೀವ ಬೆದರಿಕೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಠಾಣೆಗೆ ಇದೀಗ ದೂರ ನೀಡಿದ್ದಾನೆ.
ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಅಂತ ಚಿನ್ನಯ್ಯ ದೂರು ನೀಡಿದ್ದಾನೆ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ, ವಿಠಲಗೌಡ, ಟಿ ಜಯಂತ್ ಹಾಗೂ ಸಮೀರ್ ಎಂಡಿ ವಿರುದ್ಧ ಆರೋಪಿ ಚಿನ್ನಯ್ಯ ದೂರು ನೀಡಿದ್ದಾನೆ. ಈ ವೇಳೆ ಬೆಳ್ತಂಗಡಿ ಠಾಣೆಗೆ ಮನವಿ ಸಲ್ಲಿಸಲು ಧರ್ಮಸ್ಥಳ ಪೊಲೀಸರು ಸೂಚನೆ ನೀಡಿದ್ದಾರೆ.






