January 16, 2026
WhatsApp Image 2025-12-26 at 2.29.52 PM

ಮೈಸೂರು : ಇಲ್ಲಿನ ವಿಶ್ವವಿಖ್ಯಾತ ಅರಮನೆ ಬಳಿ ಬಲೂನ್​ಗೆ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ವಿಶ್ವ ವಿಖ್ಯಾತ ಮೈಸೂರು ಅರಮನೆಯ ಬಳಿ ಜಯಮಾರ್ತಾಂಡ ದ್ವಾರದ ಬಳಿ ಈ ಘಟನೆ ನಡೆದಿದೆ.

ಬಲೂನ್​ಗೆ ಬಳಸುವ ಹೀಲಿಯಂ ಗ್ಯಾಸ್​​ನ ಸಿಲಿಂಡರ್​ ಸ್ಫೋಟಗೊಂಡಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಐವರಲ್ಲಿ ಇಬ್ಬರು ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೂಡಲೇ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸಲೀಂ ಖಮರುದ್ದೀನ್ (40) ಮೃತ ವ್ಯಕ್ತಿ.

ಇದೀಗ ಈ ಒಂದು ಅರಮನೆಯ ಬಳಿ ಇಲಿಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಲೀಂ ಜೊತೆಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಜೊತೆಗೆ ಇಬ್ಬರೂ ಸಹ ಮಾರಾಟಕ್ಕೆ ಬಂದಿದ್ದರು ಎನ್ನಲಾಗಿದೆ ಇದೀಗ ಉತ್ತರ ಪ್ರದೇಶದ ಮೂಲದ ಇಬ್ಬರು ವನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಲೀಂ ಜೊತೆಗೆ ಇಬ್ಬರು ಸಹ ಬಲೂನ್ ಮಾರಾಟ ಮಾಡಲು ತೆರಳುತ್ತಿದ್ದರು ಆದರೆ ನಿನ್ನೆ ಸಲಿ ಒಬ್ಬನೇ ಬಲೂನ್ ಮಾರಲು ಹೋಗಿದ್ದ ಉಳಿದ ಇಬ್ಬರು ಲಾಡ್ಜ್ ನಲ್ಲಿಯೇ ಉಳಿದುಕೊಂಡಿದ್ದರು ನಿನ್ನೆ ಬಲೂನ್ ಮಾಡಲು ಉಳಿದ ಇಬ್ಬರು ಯಾಕೆ ಹೋಗಲಿಲ್ಲ ಎಂದು ಈ ಅನುಮಾನದೊಂದಿಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ

ಬಲೂನ್​ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುವಾಗ ಏಕಾಏಕಿ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ದೌಡಾಯಿಸಿ, ಪರಿಶೀಲನೆ ನಡೆಸಿದರು. ಗಾಯಗೊಂಡಿರುವ ಐದು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಘಟನೆಯಿಂದ ಬೆಚ್ಚಿಬಿದ್ದಿದೆ.

About The Author

Leave a Reply